ಮೈಸೂರು

ಸಚಿವ ಡಾ. ಮಹದೇವಪ್ಪ ಅವರ ಆರೋಗ್ಯ ವಿಚಾರಿಸಿದ ಸಿಎಂ

ಕಾಲುನೋವಿನ ಚಿಕಿತ್ಸೆಗೆಂದು ಮೈಸೂರಿನ ಕುವೆಂಪುನಗರದ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಯೋಗಕ್ಷೇಮವನ್ನು ವಿಚಾರಿಸಲು ಹಾಗೂ ಅವರ ಜನ್ಮದಿನದ ಶುಭಾಶಯವನ್ನು ತಿಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿದರು.

ಮೈಸೂರಿನ ಅಪೋಲೋ ಆಸ್ಪತ್ರೆಗೆ ಗುರುವಾರ ಸಾಯಂಕಾಲ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಯೋಗಕ್ಷೇಮ ವಿಚಾರಿಸಿ, ಜನ್ಮದಿನದ ಶುಭಾಶಯವನ್ನು ತಿಳಿಸಿದರು. ಶೀಘ್ರಗುಣಮುಖರಾಗುವಂತೆ ಹಾರೈಸಿದರು. ಸುಮಾರು ಎರಡು ಗಂಟೆಗೂ ಅಧಿಕ ಕಾಲ ಮಾತನಾಡಿದರು.  ಈ ಸಂದರ್ಭ ಕೃಷ್ಣರಾಜ ಕ್ಷೇತ್ರದ ಶಾಸಕ ಎಂ.ಕೆ.ಸೋಮಶೇಖರ್, ಚಾಮರಾಜಕ್ಷೇತ್ರದ ಶಾಸಕ ಪಿ.ವಾಸು ಮುಖ್ಯಮಂತ್ರಿಗಳ ಜೊತೆಗಿದ್ದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮಹದೇವಪ್ಪ ಚೆನ್ನಾಗಿದ್ದಾರೆ. ಏನೂ ತೊಂದರೆ ಇಲ್ಲ. ಆರೋಗ್ಯ ವಿಚಾರಿಸಿದ್ದೇನೆ. ಚುನಾವಣೆಯಲ್ಲಿ ಓಡಾಡಿರುವುದರಿಂದ ಕಾಲಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

Leave a Reply

comments

Related Articles

error: