ಕರ್ನಾಟಕಪ್ರಮುಖ ಸುದ್ದಿ

ಅಧಿವೇಶನ ಎದುರಿಸಲಾಗದವರಿಂದ ಸಿಡಿ ಜಪ, ಕುಂಟು ನೆಪ: ಕಾಂಗ್ರೆಸ್ ಸದಸ್ಯರ ವಿರುದ್ಧ ಸಿಎಂ ಬಿಎಸ್ವೈ ವಾಗ್ದಾಳಿ

ಬೆಂಗಳೂರು,ಮಾ.23-ಅಧಿವೇಶನ ಎದುರಿಸಲಾಗದವರು ಸಿಡಿ ಜಪ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಾಂಗ್ರೆಸ್ ಸದಸ್ಯರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ವೈ ಅವರು, ಅಧಿವೇಶನ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರು ಕುಂಟು ನೆಪ ಹೇಳಿ ಪ್ರತಿಭಟನೆ ಮಾಡುತ್ತಿದ್ದಾರೆ. ರಮೇಶ್ ಜಾರಕಿಹೊಳಿ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತನಿಖೆ ನಡೆಸಲು ಸರ್ಕಾರ ಎಲ್ಲಾ ಕ್ರಮ ಕೈಗೊಂಡಿದೆ. ಆದರೆ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲು ಬೇರೆ ವಿಚಾರ ಸಿಗದೆ ಇರುವುದರಿಂದ ಕಾಂಗ್ರೆಸ್ ಸದಸ್ಯರು ಧರಣಿ ನಡೆಸುತ್ತಿದ್ದಾರೆ ಎಂದು ಹರಿಹಾಯ್ದರು.

ಸಿ.ಡಿ ಪ್ರಕರಣದ ಯುವತಿ ಸಿಗುತ್ತಿಲ್ಲ. ಆಕೆ ಸಿಕ್ಕ ಮೇಲೆ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು ಎಂದು ನೀಡಿದ ಅವರು, ನಾನು ನಿಮ್ಮೆಲ್ಲರ ಮಾತುಗಳನ್ನು ಆಲಿಸುತ್ತಿದ್ದೇನೆ. ಸುಸೂತ್ರವಾಗಿ ಕಲಾಪ ನಡೆಸಲು ಬಿಡಿ ಎಂದು ಬಿಎಸ್ವೈ ಅವರು ಕಾಂಗ್ರೆಸ್ ಸದಸ್ಯರಲ್ಲಿ ಮನವಿ ಮಾಡಿಕೊಂಡರು. (ಎಂ.ಎನ್)

Leave a Reply

comments

Related Articles

error: