ಕ್ರೀಡೆದೇಶಪ್ರಮುಖ ಸುದ್ದಿ

ಟಾಸ್ ಗೆದ್ದ  ಇಂಗ್ಲೆಂಡ್  ಬೌಲಿಂಗ್ ಮಾಡಲು ನಿರ್ಧಾರ : ಪ್ರಸಿದ್ಧ ಕೃಷ್ಣ ಮತ್ತು ಕೃನಾಲ್ ಪಾಂಡ್ಯ  ಗೆ ಚೊಚ್ಚಲ ಅವಕಾಶ  

ದೇಶ(ಪುಣೆ)ಮಾ.23:- ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಇಂದು ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿದೆ.

ಮಧ್ಯಾಹ್ನ 01. 30 ರಿಂದ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂದ್ಯ ಆರಂಭವಾಗಿದೆ. 01 ಗಂಟೆಗೆ ಟಾಸ್ ಇದ್ದು, ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಮಾಡಲು ನಿರ್ಧರಿಸಿತು.   ಭಾರತ ತಂಡಕ್ಕಾಗಿ ಈ ಪಂದ್ಯದಲ್ಲಿ ಪ್ರಸಿದ್ಧ ಕೃಷ್ಣ ಮತ್ತು ಕೃನಾಲ್ ಪಾಂಡ್ಯ ಪಾದಾರ್ಪಣೆ ಮಾಡುತ್ತಿದ್ದಾರೆ. ಪ್ಲೇಯಿಂಗ್ ಇಲೆವೆನ್ ರಲ್ಲಿ  ರಿಷಭ್ ಪಂತ್ ಅವರನ್ನು ಸೇರಿಸಲಾಗಿಲ್ಲ. ಈ ಪಂದ್ಯದಲ್ಲಿ ಕೆ.ಎಲ್.ರಾಹುಲ್ ವಿಕೆಟ್ ಕೀಪಿಂಗ್ ಮಾಡಲಿದ್ದಾರೆ.

ಟೀಂ ಇಂಡಿಯಾದಲ್ಲಿ ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಶಾರ್ದುಲ್ ಠಾಕೂರ್, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್ ಮತ್ತು ಪ್ರಸಿದ್ಧ ಕೃಷ್ಣ ಇದ್ದಾರೆ.

ಇಂಗ್ಲೆಂಡ್ ತಂಡದಲ್ಲಿ  ಜೇಸನ್ ರಾಯ್, ಜಾನಿ ಬೈರ್‌ಸ್ಟೋವ್, ಇಯೊನ್ ಮೋರ್ಗಾನ್ (ನಾಯಕ), ಜೋಸ್ ಬಟ್ಲರ್ (ವಿಕೆಟ್‌ಕೀಪರ್), ಬೆನ್ ಸ್ಟೋಕ್ಸ್, ಸ್ಯಾಮ್ ಬಿಲ್ಲಿಂಗ್ಸ್, ಮೊಯಿನ್ ಅಲಿ, ಸ್ಯಾಮ್ ಕುರ್ರನ್, ಟಾಮ್ ಕುರ್ರನ್, ಆದಿಲ್ ರಶೀದ್ ಮತ್ತು ಮಾರ್ಕ್ ವುಡ್ ಇದ್ದಾರೆ.

ಟಾಸ್   ನಂತರ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿ “ನಾವು ಮೊದಲು ಬ್ಯಾಟಿಂಗ್ ಮಾಡಲು ಸಂತೋಷಪಡುತ್ತೇವೆ. ನಮ್ಮಲ್ಲಿ ಕೆಲವು ವಿಭಿನ್ನ ಯೋಜನೆಗಳಿವೆ. ಸಂಜೆ ಹವಾಮಾನವು ತೀವ್ರವಾಗಿ ಬದಲಾಗಲಿದೆ.  ರನ್ ಗಳಿಸಲು ಇದು ನಮಗೆ ಉತ್ತಮ ಅವಕಾಶವಾಗಿದೆ.   ಇಂಗ್ಲೆಂಡ್ ವಿರುದ್ಧ ನಾವು ಇಲ್ಲಿ ಆಡಿದ್ದು ಅದ್ಭುತ ಸ್ಮರಣೆಯಾಗಿದೆ ಎಂದಿದ್ದಾರೆ.   ಕೆಎಲ್ ರಾಹುಲ್ ಐದನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಮೊದಲ ನಾಲ್ಕು ಸ್ಥಾನಗಳು ರೋಹಿತ್, ಶಿಖರ್, ಕೊಯ್ಲಿ ಮತ್ತು ಶ್ರೇಯಸ್ ಇದ್ದು, ಪಂದ್ಯದಲ್ಲಿ ಕೃನಾಲ್ ಮತ್ತು ಪ್ರಸಿದ್ಧ ಕೃಷ್ಣ ಚೊಚ್ಚಲ ಪಾದಾರ್ಪಣೆ ಮಾಡುತ್ತಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: