
ದೇಶಪ್ರಮುಖ ಸುದ್ದಿ
ಎಐಎಡಿಎಂಕೆ ಸಂಸದ ಮೊಹಮ್ಮದ್ಜಾನ್ ಹಠಾತ್ ನಿಧನ
ದೇಶ(ತಮಿಳ್ನಾಡು)ಮಾ.24:- ಎಐಎಡಿಎಂಕೆ ಸಂಸದ ಮೊಹಮ್ಮದ್ಜಾನ್ ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರಿಗೆ 73ವರ್ಷ ವಯಸ್ಸಾಗಿತ್ತು. ಪ್ರಚಾರ ಮುಗಿಸಿ ನಿನ್ನೆ ಮಧ್ಯಾಹ್ನ ಊಟಕ್ಕಾಗಿ ಮನೆಗೆ ಬಂದಿದ್ದ ಅವರು, ಸಂಜೆಯ ಪ್ರಚಾರಕ್ಕೆ ಸಿದ್ಧತೆ ನಡೆಸುವಾಗಲೇ ಎದೆ ನೋವಿನಿಂದ ಕುಸಿದು ಬಿದ್ದಿದ್ದರು. ಕೂಡಲೇ ವಾಲಾಜಪೇಟೆಯ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಬೇಕಾದರೆ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆಸ್ಪತ್ರೆ ಮಹಾನಿರ್ದೇಶಕ ಸಿಂಗರಾವೇಲು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಮೃತದೇಹವನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. (ಏಜೆನ್ಸೀಸ್,ಎಸ್.ಎಚ್)