ಕರ್ನಾಟಕ

ವಿಲೇವಾರಿಯಾಗದ 6500ಪ್ರಕರಣಗಳಿದ್ದು ಮುಕ್ತಿ ಕಾಣಿಸಬೇಕಿದೆ : ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ

ತುಮಕೂರು : ಲೋಕಾಯುಕ್ತದಲ್ಲಿ ಕ್ರಮಕ್ಕಾಗಿ ಕಾಯುತ್ತ ವಿಲೇವಾರಿಯಾಗದ 6500 ಪ್ರಕರಣಗಳಿವೆ ಇವುಗಳಿಗೆ ಮುಕ್ತಿ ಕಾಣಿಸಬೇಕಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ  ಹೇಳಿದರು.

ಲೋಕಾಯುಕ್ತ ಎಂಬ ಸಂಸ್ಥೆ ಒಬ್ಬ ವ್ಯಕ್ತಿಯಿಂದ ನಡೆಯುವಂತದಲ್ಲ. ಸಂಸ್ಥೆಯೇ ವ್ಯಕ್ತಿಯಲ್ಲ ಎಂಬ ಅರಿವು ಜನರಲ್ಲಿ ಮೂಡಬೇಕಿದೆ ಎಂದು ಆಭಿಪ್ರಾಯಪಟ್ಟರು. ಮಾಧ್ಯಮ ಭ್ರಷ್ಟಾಚಾರದ ಬಗ್ಗೆ ಹೆಚ್ಚು ದೂರು ಬರುತ್ತಿವೆ’ ಮಾಧ್ಯಮಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಇತ್ತೀಚೆಗೆ ಸಾಕಷ್ಟು ದೂರುಗಳು ಬರುತ್ತಿವೆ. ಆದರೆ ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಲೋಕಾಯುಕ್ತ ನ್ಯಾ. ವಿಶ್ವನಾಥಶೆಟ್ಟಿ ತಿಳಿಸಿದರು.
ಲೋಕಾಯುಕ್ತ ಯಾರಿಗೂ ಹೆದರುವ ಅಗತ್ಯವಿಲ್ಲ. ಬಲಿಷ್ಠರಿಗೆ ಹೆದರಿ ಲೋಕಾಯುಕ್ತ ಸಂಸ್ಥೆಗೆ ಮೋಸ ಮಾಡಲ್ಲ. ಜನರ ಹಿತಕ್ಕಾಗಿ ಕೆಲಸ ಮಾಡುತ್ತೇನೆ. ನನ್ನ ಕಾರ್ಯವೈಖರಿಯೇ ಬೇರೆ ರೀತಿಯಲ್ಲಿರುತ್ತದೆ ಎಂದು ತಿಳಿಸಿದರು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: