
ಕ್ರೀಡೆಪ್ರಮುಖ ಸುದ್ದಿ
ಐಎಸ್ಎಸ್ಎಫ್ ವಿಶ್ವಕಪ್ ಶೂಟಿಂಗ್ : ಭಾರತಕ್ಕೆರಡು ಚಿನ್ನ
ದೇಶ( ನವದೆಹಲಿ)ಮಾ.24:- ಐಎಸ್ಎಸ್ಎಫ್ ವಿಶ್ವಕಪ್ ಶೂಟಿಂಗ್ನಲ್ಲಿ ಭಾರತೀಯರ ಬಂಗಾರದ ಬೇಟೆ ಮುಂದು ವರಿದಿದೆ. ಮಿಕ್ಸೆಡ್ ಸ್ಕೀಟ್ ತಂಡ ಸ್ಪರ್ಧೆ ಯಲ್ಲಿ ಗಾನೇಮತ್ ಶೆಖೋನ್-ಅಂಗದ್ ವೀರ್ ಸಿಂಗ್ ಬಾಜ್ವಾ ಚಿನ್ನಕ್ಕೆ ಗುರಿ ಇರಿಸಿದರು.
ಫೈನಲ್ ನಲ್ಲಿ ಭಾರತದ ಜೋಡಿ ಕಜಾಕ್ ಸ್ಥಾನದ ಓಲ್ಗಾ ಪನರಿನಾ-ಅಲೆಕ್ಸಾಂಡರ್ ಯೆಶೆಂಕೊ ವಿರುದ್ಧ 33-29 ಅಂತರದ ಗೆಲುವು ಸಾಧಿಸಿತು. ಇದರೊಂದಿಗೆ ಕೂಟದಲ್ಲಿ ಭಾರತ ಗೆದ್ದ ಚಿನ್ನದ ಪದಕಗಳ ಸಂಖ್ಯೆ ಏಳಕ್ಕೆ ಏರಿತು. ಆತಿಥೇಯರ ಪಡೆ ಅಗ್ರಸ್ಥಾನ ಕಾಯ್ದುಕೊಂಡಿತು.
ಇದೇ ಸ್ಪರ್ಧೆಯಲ್ಲಿದ್ದ ಭಾರತದ ಪರಿನಾಜ್ ಧಾಲೀ ವಾಲ್-ಮೈರಾಜ್ ಅಹ್ಮದ್ ಖಾನ್ ಕಂಚಿನ ಪದಕ ದಿಂದ ವಂಚಿತರಾದರು. ಇಲ್ಲಿ ಕತಾರ್ನ ರೀಮ್ ಎ ಶಶಾìನಿ-ರಶೀದ್ ಹಮದ್ ಜೋಡಿ ಜಯ ಸಾಧಿಸಿತು. (ಏಜೆನ್ಸೀಸ್,ಎಸ್.ಎಚ್)