ಮೈಸೂರು

ದೇವಾಲಯದ ಮೇಲೆ ಉರುಳಿಬಿದ್ದ ಬೃಹತ್ ಮರ : ದೇವಾಲಯ ಜಖಂ

ಮಂಡ್ಯ ಜಿಲ್ಲೆಯಾದ್ಯಂತ ಬಿರುಗಾಳಿ ಸಹಿತ ಮಳೆಗೆ ಮರಗಳು ಧರೆಗುರುಳಿದ್ದು, ಮನೆ, ದೇವಾಲಯ ಸೇರಿದಂತೆ ಹಲವು ವಸ್ತುಗಳು ಜಖಂಗೊಂಡಿವೆ.
ಗುರುವಾರ ರಾತ್ರಿ ಸುರಿದಿದ್ದ ಭಾರೀ ಮಳೆಗೆ ಮಂಡ್ಯ ತಾಲೂಕಿನ ಬಂಕನಹಳ್ಳಿಯಲ್ಲಿ ಐತಿಹಾಸಿಕ ಈಶ್ವರ ದೇವಾಲಯದ ಮೇಲೆ ಬೃಹತ್ ಅರಳಿಮರವೊಂದು ಉರುಳಿಬಿದ್ದ ಪರಿಣಾಮ ದೇವಾಲಯ ಸಂಪೂರ್ಣ ಜಖಂಗೊಂಡಿದೆ. ಮದ್ದೂರು, ಕೆಆರ್ ಪೇಟೆ ತಾಲೂಕಿನಲ್ಲಿ ಮನೆಗಳ ಮೇಲೆ ಮರ ಉರುಳಿ ಬಿದ್ದಿದ್ದು ಅನಾಹುತ ಸೃಷ್ಟಿಸಿದೆ. ಕೆಆರ್ ಪೇಟೆ ತಾಲೂಕಿನ, ಮತ್ತಿಘಟ್ಟ ಗ್ರಾಮದಲ್ಲಿ ರೈತ ಬಸವರಾಜ್ ಎಂಬುವವರ ಮನೆ ಮೇಲೆ ಮರ ಮೇಲ್ಛಾವಣಿ ಜಖಂಗೊಂಡಿದೆ. (ಕೆ.ಎಸ್-ಎಸ್.ಎಚ್)

 

Leave a Reply

comments

Related Articles

error: