ಮೈಸೂರು

ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ಮಂಡಳಿ ಅಧ್ಯಕ್ಷರ ಭೇಟಿ

ಮೈಸೂರು,ಮಾ.24:- ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ಮಂಡಳಿ ಅಧ್ಯಕ್ಷರು ಹಾಗೂ ಕುಂಚಿಟಿಗ ಜನಾಂಗದ ಮುಖಂಡರಾದ ಎಸ್.ಆರ್ ಗೌಡ ಅವರು ಇಂದು ಮೈಸೂರಿನ ಧರ್ಮಪಾರಾಯಿಣ ಅಲಮ್ಮನವರ ಛತ್ರದಲ್ಲಿರುವ ಕುಂಚಿಟಿಗರ ಸಂಘಕ್ಕೆ ಭೇಟಿ ನೀಡಿದರು.

ಈ  ಸಂದರ್ಭ  ಸಂಘದ  ಪದಾಧಿಕಾರಿಗಳು ಹಾಗೂ ನಿರ್ದೇಶಕರು ಹೃದಯಪೂರ್ವಕವಾಗಿ ಸ್ವಾಗತಿಸಿ ಸಂಘದ ಪರವಾಗಿ ಅಭಿನಂದಿಸಿದರು.  ಈ ವೇಳೆ ಎನ್. ಪ್ರದೀಪ್ ಕುಮಾರ್.  ಎಂ.ಆರ್ ಯೋಗೇಶ್. ಸಿ.ಕೆ. ಗಣೇಶ್.ವಿ.ರವಿ. ದೀಪಕ್. ಲೋಕೇಶ್ ಕಾಂತ, ಜನಾಂಗದ ಮುಖಂಡರಾದ ಉಮೇಶ್ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: