ಕರ್ನಾಟಕಪ್ರಮುಖ ಸುದ್ದಿ

ಸಿದ್ದು, ಎಚ್ಡಿಕೆ, ಡಿಕೆಶಿ, ರಮೇಶ್ ಕುಮಾರ್ ಏಕಪತ್ನಿ ವ್ರತಸ್ಥರಾ? ನನ್ನನ್ನೂ ಸೇರಿದಂತೆ ಎಲ್ಲ ಶಾಸಕರ ತನಿಖೆಯಾಗಲಿ: ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು,ಮಾ.24-ನನ್ನನ್ನೂ ಸೇರಿದಂತೆ ವಿಧಾನಸಭೆಯಲ್ಲಿರುವ 224 ಜನಪ್ರತಿನಿಧಿಗಳ ಬಗ್ಗೆಯೂ ತನಿಖೆ ನಡೆಯಲಿ. ಯಾರ ಬಂಡವಾಳ ಏನು ಎಂಬುದು ತನಿಖೆ ಮೂಲಕ ಬಯಲಾಗಲಿ. ಅನೈತಿಕ ಸಂಬಂಧ ಹಾಗೂ ವಿವಾಹ ಬಾಹಿರ ಸಂಬಂಧವೂ ಹೊರಬರಲಿ ಎಂದು ಸಚಿವ ಡಾ.ಕೆ.ಸುಧಾಕರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸಿಡಿ ವಿಚಾರವಾಗಿ ಕಾಂಗ್ರೆಸ್ ನಾಯಕರು ಸದನದಲ್ಲಿ ಪ್ರತಿಭಟನೆ ಮುಂದುವರೆಸಿರುವ ಹಿನ್ನೆಲೆಯಲ್ಲಿ ಹಾಗೂ 6 ಸಚಿವರ ರಾಜೀನಾಮೆಗೆ ಒತ್ತಾಯಿಸಿರುವ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ,  ಕುಮಾರಸ್ವಾಮಿ, ರಮೇಶ್ ಕುಮಾರ್, ಡಿ.ಕೆ.ಶಿವಕುಮಾರ್ ಇವರೆಲ್ಲರೂ ಸತ್ಯ ಹರಿಶ್ಚಂದ್ರರು, ಏಕಪತ್ನಿ ವ್ರತಸ್ಥರು ಸಮಾಜಕ್ಕೆ ಮಾದರಿಯಾದವರು. ಎಲ್ಲರ ಮೇಲೆ ತನಿಖೆ ಯಾಗಲಿ ಯಾರ್ಯಾರ ಬಂಡವಾಳ ಏನು ಅಂತ ಗೊತ್ತಾಗುತ್ತದೆ. ಇದನ್ನು ನಾನು ಎದುರಿಸಲು ಸಿದ್ದವಾಗಿದ್ದೇನೆ ಎಂದು ತಿಳಿಸಿದರು.

ನಿಮ್ಮ ಜೀವನದಲ್ಲಿ ಯಾರು ಅನೈತಿಕ ಸಂಬಂಧ ಇಟ್ಟುಕೊಂಡಿಲ್ವಾ? ಎಲ್ಲವೂ ಸಾಬೀತು ಆಗಲಿ. ತನಿಖೆ ನಡೆದರೆ ಯಾರ ಚರಿತ್ರೆ ಏನು ಎಂದು ಗೊತ್ತಾಗುತ್ತೆ. ‌ಯಾರು ಸಿಎಂ ಆಗಿದ್ದ ಸಂದರ್ಭದಲ್ಲಿ ಏನು ಮಾಡಿದ್ದರು ಎಲ್ಲವೂ ತನಿಖೆ ಆಗಿ ಬಿಡಲಿ. ಎಲ್ಲ ಸಚಿವರು, ಶಾಸಕರ ತನಿಖೆ ನಡೆಯಲಿ, ಅನೈತಿಕ ಸಂಬಂಧ ಹಾಗೂ ವಿವಾಹ ಬಾಹಿರ ಸಂಬಂಧವೂ ಹೊರಬರಲಿ ಎಂದು ಸುಧಾಕರ್‌ ಸವಾಲು ಹಾಕಿದ್ದಾರೆ.

ಇವರೆಲ್ಲ ಸತ್ಯ ಹರಿಶ್ಚಂದ್ರರಂತೆ ಈಗ ಮಾತನಾಡುತ್ತಿದ್ದಾರೆ. ತನಿಖೆ ನಡೆದರೆ ಎಲ್ಲವೂ ಗೊತ್ತಾಗಲಿದೆ ಎಂದು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‍ಗೆ ಮಾಡಲು ಕೆಲಸವಿಲ್ಲ. ವೈಯಕ್ತಿಕ ಅಜೆಂಡಾಗಳನ್ನಿಟ್ಟುಕೊಂಡು ಸದನಕ್ಕೆ ಅಡ್ಡಿಪಡಿಸುತ್ತಿದೆ. ಈಗಾಗಲೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನು ಎಸ್‍ಐಟಿಗೆ ವಹಿಸಲಾಗಿದೆ. ನ್ಯಾಯಾಂಗದ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲದವರು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಸುಧಾಕರ್ ತಿರುಗೇಟು ನೀಡಿದರು. (ಎಂ.ಎನ್)

Leave a Reply

comments

Related Articles

error: