ಸುದ್ದಿ ಸಂಕ್ಷಿಪ್ತ

ಆನ್‍ಲೈನ್ ಪದವಿ ಮತ್ತು ಸ್ನಾತಕೋತ್ತರ ಪದವಿಯ ಪ್ರವೇಶಾತಿಗೆ ಅರ್ಜಿ ಆಹ್ವಾನ

ಮೈಸೂರು,ಮಾ.24:- ಯುಜಿಸಿಯ ಮಾನ್ಯತೆಯೊಂದಿಗೆ ಮೈಸೂರು ವಿಶ್ವ ವಿದ್ಯಾನಿಲಯವು ಆನ್‍ ಲೈನ್ ಮಾದರಿಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯ ಪ್ರವೇಶಕ್ಕಾಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪದವಿ ಕೋರ್ಸ್‍ಗಳಾದ ಬಿ.ಬಿ.ಎ, ಬಿ.ಸಿ.ಎ, ಬಿ.ಕಾಂ ಹಾಗೂ ಎಂ.ಬಿ.ಎ, ಎಂ.ಸಿ.ಎ., ಎಂ.ಕಾಂ, ಎಂಎಸ್ಸಿ ಐಟಿ, ಎಂ.ಎಸ್, ಎಂ.ಬಿ.ಎ ಇನ್ ಸಪ್ಲೈ ಚೈನ್ ಮ್ಯಾನೇಜ್‍ ಮೆಂಟ್, ಎಂ.ಬಿ.ಎ ಇನ್ ಆಪರೇಷನ್ಸ್, ಎಂ.ಬಿ.ಎ ಇನ್ ಮಾರ್ಕೆಟಿಂಗ್, ಎಂ.ಬಿ.ಎ ಇನ್ ಹ್ಯುಮನ್ ರಿಸೋರ್ಸ್ ಮ್ಯಾನೇಜ್ಮೆಂಟ್,ಎಂ.ಬಿ.ಎ ಇನ್ ಫಿನಾನ್ಸ್ ಸ್ನಾತಕೋತ್ತರ ಕೋರ್ಸ್‍ಗಳಿಗೆ ಪ್ರವೇಶಾತಿ ಪಡೆಯಲು ಮೈಸೂರು ವಿಶ್ವವಿದ್ಯಾನಿಲಯದ ವೆಬ್‍ಸೈಟ್ www.uni-mysore.ac.in ನಲ್ಲಿ Online Programme ಮೇಲೆ ಕ್ಲಿಕ್ ಮಾಡಬಹುದು.
ಪ್ರವೇಶಾತಿ ಪಡೆಯಲು ಏಪ್ರಿಲ್ 30 ರಂದು ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಮಾನಸ ಗಂಗೋತ್ರಿಯ ಆನ್‍ಲೈನ್ ಶಿಕ್ಷಣಾಲಯದ ನಿರ್ದೇಶಕರು ದೂ. ಸಂ: 0821-2419531, 2419531ಅನ್ನು ಸಂಪರ್ಕಿಸಬಹುದು ಎಂದು ದೂರ ಶಿಕ್ಷಣ ನಿರ್ದೇನಾಲಯದ ನಿರ್ದೇಶಕರಾದ ಪ್ರೊ. ನಿರಂಜನ ವಾನಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

comments

Related Articles

error: