ಮೈಸೂರು

ವಿವಿಪುರಂ ಪೊಲೀಸ್ ಸಿಬ್ಬಂದಿಯವರ ನಿರ್ಲಕ್ಷ್ಯದಿಂದ ದೇವರಾಜು ಮರಣ : ವಕೀಲ ಮೋಹನ್ ಕುಮಾರ್ ದೂರು

ಮೈಸೂರು,ಮಾ.25:- 22/3/2021ರಂದು ವಿವಿಪುರಂ ಪೊಲೀಸ್ ಸಿಬ್ಬಂದಿಯವರ ನಿರ್ಲಕ್ಷ್ಯದಿಂದ ದೇವರಾಜು ಎಂಬ ವ್ಯಕ್ತಿ ಮರಣ ಹೊಂದಿರುವ ಕುರಿತಂತೆ ವಕೀಲ ಮೋಹನ್ ಕುಮಾರ್ ಎಂಬವರು ವಿಜಯನಗರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಿಗೆ ದೂರು ನೀಡಿದ್ದಾರೆ.

ದೂರಿನಲ್ಲಿ ಹೆಚ್.ಡಿ.ಕೋಟೆ ತಾಲೂಕಿನ ಕನ್ನೇನಹಳ್ಳಿ ನಿವಾಸಿಯಾದ ಸುಮಾರು 46ವರ್ಷ ವಯಸ್ಸಿನ ದೇವರಾಜು ಸಿವಿಲ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ನನಗೆ ನಂಬಲು ಅರ್ಹವಾದ ಸಾರ್ವಜನಿಕ ಮೂಲಗಳಿಂದ ತಿಳಿದು ಬಂದ ವಿಚಾರ ಏನೆಂದರೆ 22/3/2021ಸುಮಾರು 5ಗಂಟೆಯ ಸಮಯದಲ್ಲಿ ವಾಹನ ತಪಾಸಣೆ ಕಾರ್ಯದಲ್ಲಿ ಮತ್ತು ದಂಡ ವಸೂಲಿಗಾಗಿ ನಿರತರಾಗಿದ್ದ ವಿವಿಪುರಂ ಸಂಚಾರಿ ಪೊಲೀಸ್ ಅವರು ವಾಹನ ತಪಾಸಣೆ ಮತ್ತು ದಾಖಲೆ ಪರಿಶೀಲನೆಗೆ ಇರುವ ಹಾನಿಕಾರಕವಲ್ಲದ ಮಾರ್ಗಗಳನ್ನು ಅನುಸರಿಸದೇ ಅವೈಜ್ಞಾನಿಕ ಮತ್ತು ಅಸ್ವಾಭಾವಿಕ ಹಾಗೂ ಗುಂಡಾ ವರ್ತನೆಯ ಮತ್ತು ಏಕಸ್ವಾಮಿವುಳ್ಳ ಮಾರ್ಗಗಳನ್ನು ಅನುಸರಿಸಿ ಮತ್ತು ಸಾರ್ವಜನಿಕರಿಗೆ ಭಯ ಮತ್ತು ಬೆದರಿಕೆಯನ್ನುಂಟು ಮಾಡುವ ಮಾರ್ಗಗಳನ್ನು ಅನುಸರಿಸಿ ವಾಹನವನ್ನು ತಪಾಸಣೆ ಮಾಡುತ್ತಿದ್ದು ದಿ.22/3/2021 ರಂದು ಸುಮಾರು 5ಗಂಟೆಯ ಸಮಯದಲ್ಲಿ ಹಿನಕಲ್ ರಿಂಗ್ ರಸ್ತೆ ಆರ್ ಎಂ.ಪಿ ವೃತ್ತದ ಬಳಿ ವಿವಿಪುರಂ ಸಂಚಾರಿ ಪೊಲೀಸ್ ಅವರು ವಾಹನ ತಪಾಸಣೆ ಮಾಡುತ್ತಿದ್ದು ಕಾನೂನಿನ ರೀತಿ, ಕಾನೂನು ರಕ್ಷಣೆ ಮಾಡಬೇಕೆಂದು ಆರಕ್ಷಕರ ಸುರಕ್ಷತೆಯ ಭರವಸೆಯನ್ನು ಮೂಡಿಸುವ ಬದಲಾಗಿ ಭಯವನ್ನುಂಟು ಮಾಡುವ ಕ್ರಮವನ್ನು ಅನುಸರಿಸಿ ಅವರ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದ ತಪಾಸಣೆ ಕಾರ್ಯದಿಂದ ಒಂದು ಮುಗ್ಧ ಸಾರ್ವಜನಿಕ ವ್ಯಕ್ತಿ ದೇವರಾಜು ಎಂಬವರನ್ನು ಬಲಿ ಪಡೆದು ಅವರ ಮರಣಕ್ಕೆ ಕಾರಣವಾದ, ಅವೈಜ್ಞಾನಿಕ ನಡವಳಿಕೆಯಿಂದ ಸಾರ್ವಜನಿಕರಿಗೆ ಗಲಾಟೆ ಮಾಡುವಂತೆ ಪ್ರಚೋದನೆಯನ್ನುಂಟು ಮಾಡುವಂತಹ ಅಕ್ರಮ ಕೃತ್ಯದಲ್ಲಿ ಮತ್ತು ತಮಗೆ ವಹಿಸಿರುವ ಸರ್ಕಾರಿ ಕರ್ತವ್ಯವನ್ನು ಕಾನೂನು ಬಾಹಿರ ರೀತಿಯಲ್ಲಿ ಚಲಾಯಿಸಿದ ನಿಯೋಜಿತ ವಿವಿಪುರಂ ಸಂಚಾರಿ ಪೊಲೀಸ್ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ದೇವರಾಜು ಅವರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಂಡಬೇಕೆಂದು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: