ದೇಶಪ್ರಮುಖ ಸುದ್ದಿಮನರಂಜನೆ

ನಟ ಆರ್.ಮಾಧವನ್ ಗೆ ಕೋವಿಡ್ ಪಾಸಿಟಿವ್: ‘3 ಈಡಿಯಟ್ಸ್’ ಪೋಸ್ಟರ್ ಹಂಚಿಕೊಂಡ ನಟ

ಮುಂಬೈ,ಮಾ.25- ಖ್ಯಾತ ನಟ ಆರ್. ಮಾಧವನ್ ಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಬಗ್ಗೆ ಸ್ವತಃ ಮಾಧವನ್ ಅವರೇ ಟ್ವಿಟ್ವರ್ ಮೂಲಕ ತಿಳಿಸಿದ್ದಾರೆ.

ತಮಗೆ ಸೋಂಕು ತಗುಲಿರುವುದನ್ನು ಬಹಿರಂಗಗೊಳಿಸುವುದರ ಜೊತೆಗೆ `3 ಈಡಿಯಟ್ಸ್’ ಸಿನಿಮಾದ ಪೋಸ್ಟರ್ ಅನ್ನು ಹಂಚಿಕೊಂಡು ‘ಫರ್ಹಾನ್ ರಾಂಚೊನನ್ನು ಅನುಸರಿಸುತ್ತಿದ್ದಾನೆ. ಆದರೆ ವೈರಲ್ ಯಾವಾಗಲೂ ನಮ್ಮ ನಂತರ ಇರುತ್ತದೆ. ಆದರೆ ಎಲ್ಲವೂ ಚೆನ್ನಾಗಿದೆ. ಈ ಒಂದು ಜಾಗದಲ್ಲಿ ನಮಗೆ ರಾಜು ಬೇಡ. ಆರೋಗ್ಯಕ್ಕಾಗಿ ಹಾರೈಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

ಮಾಧವನ್ ಕ್ರಿಯೇಟಿವ್ ಪೋಸ್ಟ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಜೊತೆಗೆ ಶೀಘ್ರ ಗುಣಮುಖರಾಗುವಂತೆ ವಿಶ್ ಮಾಡುತ್ತಿದ್ದಾರೆ.

ನಿನ್ನೆಯಷ್ಟೇ ಬಾಲಿವುಡ್ ನಟ ಅಮೀರ್ ಖಾನ್ ಗೆ ಕೊರೊನಾ ಸೋಂಕು ತಗುಲಿತ್ತು. ಇದೀಗ ಮಾಧವನ್ ಗೆ ಸೋಂಕು ತಗುಲಿದೆ. (ಏಜೆನ್ಸೀಸ್, ಎಂ.ಎನ್)

 

 

Leave a Reply

comments

Related Articles

error: