ಕರ್ನಾಟಕಪ್ರಮುಖ ಸುದ್ದಿ

ಹಳಿ ತಪ್ಪಿದ ರೈಲು : ಇಬ್ಬರಿಗೆ ಗಂಭಿರ ಗಾಯ

ಬೀದರ್:  ಇಲ್ಲಿನ ಭಾಲ್ಕಿ ತಾಲೂಕಿನಲ್ಲಿ ಔರಂಗಾಬಾದ್‌‌-ಹೈದರಾಬಾದ್‌ ಪ್ಯಾಸೆಂಜರ್‌ ರೈಲು ಹಳಿ ತಪ್ಪಿದ ಪರಿಣಾಮ  ಇಬ್ಬರು ಪ್ರಯಾಣಿಕರು ಗಂಭೀರವಾಗಿ  ಗಾಯಗೊಂಡಿದ್ದಾರೆ.

ಭಾಲ್ಕಿ ತಾಲೂಕಿನ ಕಾಳಗಾಪುರ ಮತ್ತು ಸಂಗಮ ರೈಲ್ವೆ ನಿಲ್ದಾಣದ ಮಧ್ಯೆ ಪ್ಯಾಸೆಂಜರ್‌ ರೈಲು ಹಳಿ ತಪ್ಪಿದ್ದು, ಶುಕ್ರವಾರ ಬೆಳಗಿನ ಜಾವ  ನಾಲ್ಕರ  ಸುಮಾರಿಗೆ ಈ ಘಟನೆ ಸಂಭವಿಸಿದೆ. ರೈಲ್ವೆಯ ಎಂಜಿನ್‌ ಹಾಗೂ 2 ಬೋಗಿಗಳು ಹಳಿ ತಪ್ಪಿವೆ ಎಂದು ತಿಳಿದುಬಂದಿದೆ.  ಘಟನಾ ಸ್ಥಳಕ್ಕೆ ರೈಲ್ವೆ ಸಿಬ್ಬಂದಿಗಳು  ದೌಡಾಯಿಸಿದ್ದು, ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿದು ಬಂದಿದೆ. ಎರಡೂ ಬೋಗಿಯಲ್ಲಿದ್ದ ಸುಮಾರು ಜನರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಮಹಾರಾಷ್ಟ್ರದ ಔರಂಗಾಬಾದ್‌‌ನಿಂದ ತೆಲಂಗಾಣದ ಹೈದರಾಬಾದ್‌ಗೆ ರೈಲು ತೆರಳುತ್ತಿತ್ತು. ಸ್ಥಳಕ್ಕೆ ಪೊಲೀಸರು ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನು ಭಾಲ್ಕಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಬೀದರ್‌ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್‌ ಖಂಡ್ರೆ ಭೇಟಿ ನೀಡಿದ್ದಾರೆ.  ಎಸ್‌‌ಪಿ ಪ್ರಕಾಶ ನಿಕ್ಕಮ್, ಡಿವೈಎಸ್‌ಪಿ ಅಶೋಕ್‌ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಪ್ರಯಾಣಿಕರನ್ನು ಸ್ಥಳಾಂತರ ಮಾಡಿಸುತ್ತಿದ್ದಾರೆ. ಕಾಳಗಾಪುರ ಸೇತುವೆ ಬಳಿ ಹಗುರವಾಗಿ ಬರುತ್ತಿದ್ದ ರೈಲು ಸೇತುವೆ ದಾಟುತ್ತಿದ್ದಂತೆ ಎಂಜಿನ್ ಹಾಗೂ ಎರಡು ಬೋಗಿ ಹಳಿ ತಪ್ಪಿವೆ. ಇದರಿಂದ ಭಾರಿ ಅನಾಹುತ ತಪ್ಪಿದೆ. ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ರೈಲ್ವೆ ಅಧಿಕಾರಿ ತಿಳಿಸಿದ್ದಾರೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: