ಮೈಸೂರು

ವಿವಿ ಹಾಸ್ಟೇಲ್ ಗಳಲ್ಲಿ ಕಳಪೆ ಆಹಾರ ಆರೋಪ; ಗುಣಮಟ್ಟದ ಆಹಾರ ನೀಡಲು ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಮಾ.25:- ಮೈಸೂರು ವಿವಿ ಹಾಸ್ಟೇಲ್ ಗಳಲ್ಲಿ ನೀಡುತ್ತಿರುವ ಆಹಾರ ಕಳಪೆಯದ್ದು ಎಂದು ಆರೋಪಿಸಿ ದಲಿತ ವಿದ್ಯಾರ್ಥಿ ಒಕ್ಕೂಟ ಮತ್ತು ಸಂಶೋಧಕರ ಸಂಘದ ನೇತೃತ್ವದಲ್ಲಿ ವಿದ್ಯಾರ್ಥಿಗಳು ವಿವಿಯ ಕ್ರಾಫರ್ಡ್ ಹಾಲ್ ಮುಂಭಾಗ ಪ್ರತಿಭಟನೆ ನಡೆಸಿದರು.

ತರಕಾರಿ, ಅಡುಗೆ ಎಣ್ಣೆ ಪ್ಯಾಕೇಟ್ ಗಳನ್ನು ರಸ್ತೆಯಲ್ಲಿ ಹರಡಿಕೊಂಡ ವಿದ್ಯಾರ್ಥಿಗಳು ಘೋಷಣೆ ಕೂಗಿದರು. ಸ್ನಾತಕೋತ್ತರ ಪುರುಷರ ವಿದ್ಯಾರ್ಥಿ ನಿಲಯ ಬ್ಲಾಕ್ -2ರಲ್ಲಿ ಕಳಪೆ ಆಹಾರ ನೀಡಲಾಗುತ್ತಿದೆ. ಇದನ್ನು ಸೇವಿಸಿದವರ ಆರೋಗ್ಯ ಹದಗೆಡುತ್ತಿದೆ. ಆರೋಗ್ಯ ಸ್ಥಿತಿ ಗಂಭೀರವಾದರೆ ಯಾರು ಹೊಣೆ, ಕೂಡಲೇ ಗುಣಮಟ್ಟದ ಆಹಾರ ನೀಡಲು ಕ್ರಮವಹಿಸಿ ಎಂದು ಒತ್ತಾಯಿಸಿದರು.

ಕುಲಸಚಿವ ಪ್ರೊ.ಆರ್.ಶಿವಪ್ಪ ಸ್ಥಳಕ್ಕಾಗಮಿಸಿ ಸಮಸ್ಯೆ ಆಲಿಸಿ ಹಾಸ್ಟೇಲ್ ಗಳಿಗೆ ಭೇಟಿ ನೀಡಿ ಆಹಾರದ ಗುಣಮಟ್ಟವನ್ನು ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ನಿಲ್ಲಿಸಿದರು.

Leave a Reply

comments

Related Articles

error: