ದೇಶಪ್ರಮುಖ ಸುದ್ದಿ

ಬಾಂಗ್ಲಾದೇಶದ 50ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಶುಭಾಶಯ ಕೋರಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್

ದೇಶ(ನವದೆಹಲಿ)ಮಾ.26:-  ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಬಾಂಗ್ಲಾದೇಶದ 50ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಬಾಂಗ್ಲಾದೇಶದ ಜನತೆಗೆ  ಶುಭಾಶಯಗಳನ್ನು ತಿಳಿಸಿದ್ದಾರೆ.

ನಿಮ್ಮ ರಾಷ್ಟ್ರೀಯ ದಿನಾಚರಣೆಯ ಅಂಗವಾಗಿ ಘನ ಸರ್ಕಾರ ಮತ್ತು ಬಾಂಗ್ಲಾದೇಶದ ಜನರಿಗೆ ಭಾರತ ಮತ್ತು ನನ್ನ ಪರವಾಗಿ ಶುಭಾಶಯಗಳನ್ನು ಕೋರುತ್ತೇನೆ. 50 ವರ್ಷಗಳ ಅನುಕರಣೀಯ ಹಾಗೂ ಅನನ್ಯ ದ್ವಿಪಕ್ಷೀಯ ಸಂಬಂಧವನ್ನು ಭಾರತ ಮತ್ತು ಬಾಂಗ್ಲಾದೇಶ ಆಚರಿಸುತ್ತಿವೆʼ ಎಂದು ತಿಳಿಸಿದ್ದಾರೆ.

ಈ ವರ್ಷ, ಸ್ವಾತಂತ್ರ್ಯ ಸಮರದ ಗೆಲುವಿನ ಸುವರ್ಣ ಮಹೋತ್ಸವ ಆಚರಣೆಯಿಂದ ನಾನು ಖುಷಿಪಟ್ಟಿದ್ದೇನೆ. 20ನೇ ಶತಮಾನದ ಅತಿದೊಡ್ಡ ಆಡಳಿತಗಾರ ಬಂಗಬಂಧು ಶೇಖ್‌ ಮುಜಿಬುರ್‌ ರೆಹಮಾನ್‌ ಅವರ ಸ್ಮರಣೀಯ ಜನ್ಮ ಶತಮಾನೋತ್ಸವದ ಆಚರಣೆಯಿಂದ ಅದು ಮತ್ತಷ್ಟು ಹೆಚ್ಚಾಗಿದೆ ಎಂದಿದ್ದಾರೆ.

ಉಭಯ ದೇಶಗಳು ವಿವಿಧ ಕ್ಷೇತ್ರಗಳಲ್ಲಿ ಸಹಕಾರ ಹೊಂದಿದ್ದು,   ಹಲವು ಕಾರ್ಯಕ್ರಮಗಳು ಮತ್ತು ನಿಮ್ಮ ಸರ್ಕಾರದ ಸಹಯೋಗದಲ್ಲಿ ನಮ್ಮ ಸರ್ಕಾರವೂ ಬಂಗಬಂಧು ಅವರ ಜನ್ಮ ಶತಮಾನೋತ್ಸವವನ್ನು ಆಚರಿಸಲಿದೆ  ಎಂದು ಹೇಳಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: