ದೇಶಪ್ರಮುಖ ಸುದ್ದಿ

ಜಯಲಲಿತಾ ಸಾವಿನ ರಹಸ್ಯ : ಆಸ್ಪತ್ರೆ ವಿಡಿಯೋ ಬಿಡುಗಡೆ ಮಾಡುತ್ತೇನೆಂದ ಶಶಿಕಲಾ ಸಂಬಂಧಿ

ಚೆನ್ನೈ: ಜಯಲಲಿತಾ ಸಾವಿನ ಕುರಿತು ಅನುಮಾನ ಹಲವಾರು ಮಂದಿ ಅನುಮಾನ ವ್ಯಕ್ತಪಡಿಸಿರುವ ಕಾರಣ ಆಸ್ಪತ್ರೆಯ ವಿಡಿಯೋ ಕ್ಲಿಪ್ಪಿಂಗ್ಸ್ ಬಿಡುಗಡೆ ಮಾಡುವುದಾಗಿ ಶಶಿಕಲಾ ಅವರ ಸಂಬಂಧಿಯೊಬ್ಬರು ಹೇಳಿದ್ದಾರೆ.

ಈ ಕುರಿತು ಫೇಸ್ಬುಕ್ ಅಲ್ಲಿ ಪೋಸ್ಟ್ ಮಾಡಿರುವ ಶಶಿಕಲಾ ಸಂಬಂಧಿ ಜಯನಾದ್ ದಿವಾಕರನ್ ಅವರು, ಜಯಲಲಿತಾ ಅವರು ಚೆನ್ನೈನ ಅಪೋಲೊ ಆಸ್ಪತ್ರೆಯಲ್ಲಿದ್ದ ಕಡೆಯ ದಿನಗಳ ವಿಡಿಯೋಗಳನ್ನು ಬಿಡುಗಡೆ ಮಾಡುತ್ತೇನೆ. ಆ ಮೂಲಕ ಜಯಾ ಮತ್ತು ಶಶಿಕಲಾ ಅವರ ನಡುವಿನ ಸಂಬಂಧ ಯಾವ ರೀತಿಯದ್ದಾಗಿತ್ತು ಎಂಬುದನ್ನು ಬಹಿರಂಗಪಡಿಸುವುದಾಗಿ ತಿಳಿಸಿದ್ದಾರೆ.

ಜಯಾ ಸಾವಿನ ನಂತರ ಎರಡು ಬಣಗಳಾಗಿ ಹೋಳಾದ ಎಐಎಡಿಎಂಕೆ, ಜಯಲಲಿತಾ ಅವರ ಸಾವಿನ ಕುರಿತು ಆರೋಪ ಪ್ರತ್ಯಾರೋಪದಲ್ಲಿ ತೊಡಗಿವೆ. ಮಾಜಿ ಮುಖ್ಯಮಂತ್ರಿ ಓ.ಪನ್ನೀರ್ ಸೆಲ್ವಂ ಮತ್ತು ಸಂಸದೆ ಶಶಿಕಲಾ ಪುಷ್ಪಾ ಸೇರಿದಂತೆ ಅನೇಕ ಮುಖಂಡರು ಅನುಮಾನ ವ್ಯಕ್ತಪಡಿಸಿ ಶಶಿಕಲಾ ನಟರಾಜನ್ ಅವರ ವಿರುದ್ಧ ತನಿಖೆ ನಡೆಸುವಂತೆ ಆಗ್ರಹಿಸಿದ್ದರು.

ಈ ಕುರಿತು ಫೇಸ್ಬುಕ್ ಪೇಜ್ ಅಲ್ಲಿ ಪ್ರತಿಕ್ರಿಯಿಸಿರುವ ಅವರ ಸಂಬಂಧಿ ನಯನಾದ್, ಜಯಲಲಿತಾ ಮತ್ತು ಶಶಿಕಲಾ ನಟರಾಜನ್ ಅವರ ಸಂಬಂಧ ಚೆನ್ನಾಗಿತ್ತು. ಜಯಲಲಿತಾ ಅವರು ತಾವು ನಿಧನ ಹೊಂದಿದ ಮೇಲೂ ಒಳ್ಳೆಯ ರೀತಿಯಲ್ಲಿ ಕಾಣಬೇಕು ಎಂದು ಶಶಿಕಲಾ ಅವರ ಜೊತೆ ಬಯಕೆ ಹಂಚಿಕೊಂಡಿದ್ದರಿಂದ ಚಿನ್ನಮ್ಮ ನಿರ್ಧಾರ ತೆಗೆದುಕೊಂಡು. ಅಮ್ಮನ ಅಭಿಮಾನಿಗಳಿಗೆ ಅಮ್ಮನನ್ನು ಸಿಂಹಿಣಿಯಂತೆಯೇ ಕೊನೆಯ ಬಾರಿ ತೋರಿಸಬೇಕು ಎಂಬುದು ಶಶಿಕಲಾ ಅವರ ಬಯಕೆಯಾಗಿತ್ತು. ಇದಕ್ಕೆ ಪೂರಕವಾದ ವಿಡಿಯೋ ಕ್ಲಿಪ್ಪಿಂಗ್ಸ್ ನನ್ನ ಬಳಿ ಇವೆ. ಅವನ್ನು ಬಹಿರಂಗಪಡಿಸುತ್ತೇನೆ ಎಂದು ಹೇಳಿದ್ದಾರೆ.

ಇದರ ಜೊತೆಗೆ “ಮಾಜಿ ಮುಖ್ಯಮಂತ್ರಿ ಓ.ಪನ್ನೀರ್ ಸೆಲ್ವಂ ಅವರು ರಾಜಕೀಯಕ್ಕಾಗಿ ಶಶಿಕಲಾ ನಟರಾಜನ್ ವಿರುದ್ಧ ಆರೋಪ ಹೊರಿಸುತ್ತಿದ್ದಾರೆ. ಇವರ ಜೊತೆ ಪಾಂಡ್ಯನ್ ಸಹೋದರರ ಸೇರಿಕೊಂಡಿದ್ದಾರೆ. ಇವರಿಗೆ ನಾವೇನು ಮಾಡಲು ಸಾಧ್ಯ? ಎಂದು ಪ್ರಶ್ನಿಸಿರುವ ಅವರು, ವಿಡಿಯೋ ಕ್ಲಿಪ್ಪಿಂಗ್ಸ್ ನಲ್ಲಿರುವ ದೃಶ್ಯಗಳು ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುತ್ತವೆ ಎಂದಿದ್ದಾರೆ.

ಎಐಎಡಿಎಂಕೆ ಪಕ್ಷದ ಹತೋಟಿ ಸಾಧಿಸಿದ ಶಶಿಕಲಾ ನಟರಾಜನ್ ತಾವೇ ಮುಖ್ಯಮಂತ್ರಿಯಾಗಲು ಅಣಿಯಾಗಿದ್ದರು. ಆದರೆ ಆಕ್ರಮ ಆಸ್ತಿ ಪ್ರಕರಣದಲ್ಲಿ ತಾವೇ ಜೈಲು ಸೇರುವ ಪರಿಸ್ಥಿತಿ ಬಂದ ಕಾರಣ ಪಳನಿಸ್ವಾಮಿಯವರನ್ನು ತಮ್ಮ ಬಣದ ನಾಯಕರಾಗಿ ಮಾಡಿ ಮುಖ್ಯಮಂತ್ರಿ ಗಾದಿಗೇರಿಸಿದ್ದಾರೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.

(ಎನ್.ಬಿ.ಎನ್)

Leave a Reply

comments

Related Articles

error: