ದೇಶಪ್ರಮುಖ ಸುದ್ದಿ

ಪ್ರಧಾನಿ ಮೋದಿಯವರನ್ನು ಟೀಕಿಸುವವರು ದೇಶಭಕ್ತರಾಗಲು ಸಾಧ್ಯವಿಲ್ಲ : ‘ಮೆಟ್ರೋ ಮ್ಯಾನ್’ ಶ್ರೀಧರನ್

ದೇಶ(ನವದೆಹಲಿ)ಮಾ.26:- ‘ಮೆಟ್ರೋ ಮ್ಯಾನ್’ ಎಂದು ಜನಪ್ರಿಯವಾಗಿರುವ ಇ ಶ್ರೀಧರನ್, ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವವರನ್ನು ಟೀಕಿಸಿದ್ದಾರೆ. ಪಿಎಂ ಮೋದಿಯವರನ್ನು ಅನಗತ್ಯವಾಗಿ ಟೀಕಿಸುವ ಇಂತಹ ಜನರು ದೇಶಭಕ್ತರಾಗಲು ಸಾಧ್ಯವಿಲ್ಲ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಶ್ರೀಧರನ್ ಹೇಳಿದ್ದಾರೆ. ಪ್ರಧಾನಿ ಮೋದಿ ತಮ್ಮ ಅಧಿಕಾರಾವಧಿಯಲ್ಲಿ ದೇಶದ ಚಿತ್ರಣವನ್ನು ಬದಲಾಯಿಸಲು ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

“ಪ್ರಧಾನಿ ಮೋದಿಯವರನ್ನು ಟೀಕಿಸುವ ಜನರು ನಿಜವಾಗಿ ಬಿಜೆಪಿಗೆ ವಿರುದ್ಧವಾಗಿದ್ದಾರೆ.  ಬಿಜೆಪಿ ಎಂದಿಗೂ ಅಧಿಕಾರದಲ್ಲಿರಲು ಅವರು ಬಯಸುವುದಿಲ್ಲ” ಎಂದು ಅವರು ಹೇಳಿದ್ದಾರೆ, “ಮೋದಿ ಅವರನ್ನು ಟೀಕಿಸುತ್ತಿದ್ದರೆ ಅದು ಸರ್ಕಾರದ  ಚಿತ್ರಣವನ್ನು ಕಳಂಕಿತಗೊಳಿಸುವುದಕ್ಕಾಗಿ ಮಾತ್ರ.”   ಅದು ದೇಶದ ವಿರುದ್ಧವಾದದ್ದು ಎಂದಿದ್ದಾರೆ.

ಇತ್ತೀಚೆಗೆ, ಅನೇಕ ವಿದೇಶಿ ಸಂಸ್ಥೆಗಳು ಭಾರತದ ಪ್ರಜಾಪ್ರಭುತ್ವದ ಬಗ್ಗೆ ಕಳವಳ ವ್ಯಕ್ತಪಡಿಸಿವೆ ಎಂಬುದರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶ್ರೀಧರನ್, “ಇಂತಹ ಸಂಸ್ಥೆಗಳು ಭಾರತದಲ್ಲಿ ನಡೆಯುತ್ತಿರುವುದರ ಬೆಳವಣಿಗೆ ಸಹಿಸಲಾಗದೇ ಅಸೂಯೆ ಪಟ್ಟಿದೆ” ಎಂದು ಹೇಳಿದ್ದಾರೆ. ಇಂದು ಭಾರತದ ಸೇನೆಯು ಬಲಗೊಂಡಿದೆ. ಆದ್ದರಿಂದ ಈ ಜನರು ಅದರ ಬಗ್ಗೆ ಅಸೂಯೆ ಪಟ್ಟಿದ್ದಾರೆ. ಇಂದು ಭಾರತದ ಸೈನ್ಯವು ವಿಶ್ವದ ನಾಲ್ಕನೇ ಅತ್ಯಂತ ಶಕ್ತಿಶಾಲಿ ಸೈನ್ಯವಾಗಿದೆ ಎಂದಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: