ದೇಶಪ್ರಮುಖ ಸುದ್ದಿ

ಕಳೆದ 24ಗಂಟೆಗಳಲ್ಲಿ ದೇಶದಲ್ಲಿ 62 ಸಾವಿರ ಕೊರೋನಾ ವೈರಸ್ ಸೋಂಕು ಪ್ರಕರಣ ಪತ್ತೆ

ದೇಶ(ನವದೆಹಲಿ)ಮಾ.27:-  ಮಾರಣಾಂತಿಕ ಕೊರೋನಾ ಸೋಂಕಿನ ಎರಡನೇ ಅಲೆ  ಮತ್ತೊಮ್ಮೆ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿದೆ.  ಮತ್ತೊಮ್ಮೆ, ಕೊರೋನಾ ಪ್ರಕರಣಗಳು ದೇಶಾದ್ಯಂತ ವೇಗವಾಗಿ ಹರಡುತ್ತಿವೆ.

161 ದಿನಗಳ ನಂತರ ಮೊದಲ ಬಾರಿಗೆ 62 ಸಾವಿರಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗಿವೆ. ಆರೋಗ್ಯ ಸಚಿವಾಲಯದ ಇತ್ತೀಚಿನ ವರದಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ 62,258 ಹೊಸ ಕೊರೋನಾ ಪ್ರಕರಣಗಳು ಬಂದಿದ್ದು, 291 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ  30,386 ಮಂದಿ ಕೊರೋನಾದಿಂದ ಚೇತರಿಸಿಕೊಂಡಿದ್ದಾರೆ. ಇದಕ್ಕೂ ಮೊದಲು 2020 ರ ಅಕ್ಟೋಬರ್ 16 ರಂದು 62,212 ಕೊರೋನಾ ಪ್ರಕರಣಗಳು ದಾಖಲಾಗಿತ್ತು.

ಇದುವರೆಗೆ ಒಟ್ಟು   ಒಂದು ಕೋಟಿ 19 ಲಕ್ಷ 8 ಸಾವಿರ 910 ಪ್ರಕರಣಗಳು ಪತ್ತೆಯಾಗಿದ್ದು, 1 ಕೋಟಿ 12 ಲಕ್ಷ 95 ಸಾವಿರಮಂದಿ ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳು – 4 ಲಕ್ಷ 52 ಸಾವಿರ 647ಇವೆ. ಒಟ್ಟು  ಒಂದು ಲಕ್ಷ 61 ಸಾವಿರ 240 ಮಂದಿ ಸಾವನ್ನಪ್ಪಿದ್ದಾರೆ. ಇದುವರೆಗೆ  5 ಕೋಟಿ 81 ಲಕ್ಷ 9 ಸಾವಿರ 773 ಡೋಸ್ ಲಸಿಕೆ ನೀಡಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: