ದೇಶಪ್ರಮುಖ ಸುದ್ದಿ

ಏ.1 ರಿಂದ ತೆರೆಯಲಿದೆ ದೆಹಲಿಯ ರಾಷ್ಟ್ರೀಯ ಝೂಲಾಜಿಕಲ್ ಪಾರ್ಕ್

ದೇಶ(ನವದೆಹಲಿ)ಮಾ.27:- ಕೊರೋನಾ ಸಾಂಕ್ರಾಮಿಕ ರೋಗದಿಂದ ಒಂದು ವರ್ಷದಿಂದ ಮುಚ್ಚಲ್ಪಟ್ಟಿದ್ದ ದೆಹಲಿಯ ರಾಷ್ಟ್ರೀಯ  ಝೂಲಾಜಿಕಲ್ ಪಾರ್ಕ್ ಮತ್ತೆ ತೆರೆಯಲು ಸಿದ್ಧವಾಗಿದೆ.

ಈ ಬಾರಿ ಏಪ್ರಿಲ್ 1 ರಿಂದ ತೆರೆಯಲಿರುವ ರಾಷ್ಟ್ರೀಯ ಝೂಲಾಜಿಕಲ್ ಪಾರ್ಕ್‌ ನಲ್ಲಿ ಜನರು ಕೋವಿಡ್ -19 ರ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕಿದ್ದು, ಉತ್ತಮ ಸೌಲಭ್ಯದ ಜೊತೆ  ಹೊಸ ಪ್ರಭೇದದ  ಪ್ರಾಣಿಗಳ  ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

ಉದ್ಯಾನವನದ ನಿರ್ದೇಶಕ ರಮೇಶ್ ಪಾಂಡೆ ಮಾತನಾಡಿ, ಈ ಒಂದು ವರ್ಷದಲ್ಲಿ ನಿರ್ವಹಣೆಯನ್ನು  ಸುಧಾರಿಸಲಾಗಿದ್ದು,   ಹೊಸ ಪ್ರಭೇದದ ಪ್ರಾಣಿಗಳ  ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.  ಉದ್ಯಾನವನಕ್ಕೆ ಪ್ರವೇಶಿಸಲು, ಜನರು ಆನ್‌ ಲೈನ್‌ ನಲ್ಲಿ ಅಥವಾ ಪ್ರವೇಶದ್ವಾರದಲ್ಲಿ ಕ್ಯೂಆರ್ ಕೋಡ್ ಬಳಸಿ ಟಿಕೆಟ್ ಕಾಯ್ದಿರಿಸಬಹುದು. ಪೂರ್ವ ನಿರ್ಧಾರಿತ ಸಮಯದಲ್ಲಿ ಜನರು   ಉದ್ಯಾನವನಕ್ಕೆ ಪ್ರವೇಶಿಸಲು ಸಾಧ್ಯವಾಗಲಿದೆ ಎಂದಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: