ಮೈಸೂರು

ಪಾರಂಪರಿಕ ಕಟ್ಟಡ ಸಂರಕ್ಷಿಸಲು ಒತ್ತಾಯಿಸಿ ಸಹಿ ಸಂಗ್ರಹ

ಮೈಸೂರಿನಲ್ಲಿರುವ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸಬೇಕೆಂದು ಒತ್ತಾಯಿಸಿ ಬೆಳಕು ಸಂಸ್ಥೆಯ ವತಿಯಿಂದ ಸಹಿಸಂಗ್ರಹ ಅಭಿಯಾನ  ನಡೆಯಿತು.

ಮೈಸೂರಿನ ಪಾರಂಪರಿಕ ಕಟ್ಟಡ ಲ್ಯಾನ್ಸ್ ಡೌನ್ ಮುಂಭಾಗ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಯಿತು.ಈ ಸಂದರ್ಭ ಪಾರಂಪರಿಕ ಕಟ್ಟಡ ಪ್ರೇಮಿಗಳು  ಮಾತನಾಡಿ ಮೈಸೂರು ನಗರ ಜಗತ್ತಿನಲ್ಲಿ ಒಂದು ಪಾರಂಪರಿಕ ನಗರವಾಗಿ ಪ್ರಸಿದ್ಧಿ ಪಡೆದಿದೆ. ಅದಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಹಲವು ಪಾರಂಪರಿಕ ಕಟ್ಟಡಗಳೂ ಇವೆ. ಇಂದು ನಗರ ವಾಣಿಜ್ಯೀಕರಣಗೊಳ್ಳುತ್ತಿದ್ದು, ಪಾರಂಪರಿಕ ಕಟ್ಟಡಗಳು ಶಿಥಿಲಗೊಂಡಿವೆ ಎಂಬ ಕಾರಣದಿಂದ ಅದನ್ನು ನೆಲಸಮಗೊಳಿಸಿ ಆ ಸ್ಥಳದಲ್ಲಿ ನವನವೀನ ಕಟ್ಟಡಗಳನ್ನು ನಿರ್ಮಿಸುವುದು ಸರಿಯಲ್ಲ. ಲ್ಯಾನ್ಸ್ ಡೌನ್ ಕಟ್ಟಡವನ್ನು ಹಾಗೂ ದೇವರಾಜ ಮಾರುಕಟ್ಟೆಯನ್ನು ಪಾರಂಪರಿಕತೆಗೆ ಅನುಗುಣವಾಗಿ ಹಿಂದಿನ ಕಟ್ಟಡವಿರುವಂತೆ ನವೀಕರಣಗೊಳಿಸಬೇಕು. ಎರಡೂ ಕಟ್ಟಡವನ್ನೂ ನೆಲಸಮ ಗೊಳಿಸದೆ ಯಥಾಸ್ಥಿತಿ ಕಾಪಾಡಿಕೊಂಡು ಹೋಗಬೇಕು. ನಗರದಲ್ಲಿರುವ 252 ಪಾರಂಪರಿಕ ಕಟ್ಟಡಗಳನ್ನು ಸರಿಯಾದ ರೀತಿಯಲ್ಲಿ ಸರ್ವೇ ನಡೆಸಿ ರಕ್ಷಿಸುವ ಕಾರ್ಯವನ್ನು ಜಿಲ್ಲಾಡಳಿತದಿಂದ ನಡೆಯಬೇಕು ಒತ್ತಾಯಿಸಿದರು.

ಸಹಿಸಂಗ್ರಹ ಅಭಿಯಾನದಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದು, ಹಿರಿಯ ನಾಗರಿಕರಿಂದಲೂ ಸಹಿ ಸಂಗ್ರಹಿಸಿದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: