ಮೈಸೂರು

ಮೌಂಟೆಡ್ ಕಂ ಜೆಟ್ಟಿಂಗ್ ಯಂತ್ರಕ್ಕೆ ಚಾಲನೆ

ಮೈಸೂರು ಮಹಾನಗರಪಾಲಿಕೆ ವಾಪ್ತಿಯಲ್ಲಿ 8 ಸಕ್ಕಿಂಗ್ ಯಂತ್ರ, 1ಸೆಸ್ ಪೂಲ್ ವಾಹನ, 4 ಸಿಲ್ಟಿಂಗ್ ವಾಹನ ಮತ್ತು 23 ರಾಡಿಂಗ್ ಯಂತ್ರಗಳು ಒಳಚರಂಡಿ ನಿರ್ವಹಣೆಯಡಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ದೈನಂದಿನ ನಿರ್ವಹಣೆಗೆ 8000ಲೀ ಸಾಮರ್ಥ್ಯದ ಟ್ರಕ್ ಮೌಂಟೆಡ್ ಕಂ ಜೆಟ್ಟಿಂಗ್ ಯಂತ್ರವನ್ನು ಟೆಂಡರ್ ಮೂಲಕ ಖರೀದಿಸಿದ್ದು, ಪಾಲಿಕೆ ಕಚೇರಿಯ ಎದುರು ಯಂತ್ರಕ್ಕೆ ಚಾಲನೆ ನೀಡಲಾಯಿತು.

ಮೈಸೂರು ಮಹಾನಗರಪಾಲಿಕೆಯ ಮೇಯರ್ ಎಂ.ಜೆ.ರವಿಕುಮಾರ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. 8000ಲೀ ಸಾಮರ್ಥ್ಯದ ನಾಲ್ಕುಜೆಟ್ಟಿಂಗ್ ಯಂತ್ರ, ಒಳಚರಂಡಿ ವ್ಯವಸ್ಥೆ ನಿರ್ವಹಣೆಗೆ 9 ಮೌಂಟೆಡ್ ಡಿ-ಸಿಲ್ಟಿಂಗ್ ಯಂತ್ರವನ್ನು ಟೆಂಡರ್ ಮೂಲಕ ಖರೀದಿಸಲಾಗಿದ್ದು ಕಾರ್ಯನಿರ್ವಹಿಸಲಿವೆ ಎಂದು ಮೇಯರ್ ಎಂ.ಜೆ.ರವಿಕುಮಾರ್ ಈ ಸಂದರ್ಭ ತಿಳಿಸಿದರು.

ಈ ಸಂದರ್ಭ ಪಾಲಿಕೆಯ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: