ಮೈಸೂರು

ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವೀ ಸೂರ್ಯ ಮೈಸೂರು ಭೇಟಿ ; ಸನ್ಮಾನ

ಮೈಸೂರು,ಮಾ.27:-  ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಮೈಸೂರಿಗೆ ಭೇಟಿ ನೀಡಿದ ಸಂಸದ  ತೇಜಸ್ವಿ ಸೂರ್ಯ ಅವರನ್ನು ಬಿಜೆಪಿ ರಾಜ್ಯ ಯುವಮೋರ್ಚಾ ಅಧ್ಯಕ್ಷರಾದ ಸಂದೀಪ್ ಕುಮಾರ್ , ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ ಅವರನ್ನು ಮೈಸೂರು ಜಿಲ್ಲಾ ಬ್ರಾಹ್ಮಣ ಯುವೇದಿಕೆ ವತಿಯಿಂದ ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀರಾಮಮಂದಿರದಲ್ಲಿ ನಡೆದ ವಿಪ್ರ ಯುವ ಚಿಂತನಾ ಸಭೆಯಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.

ಇದೇ ಸಂದರ್ಭದಲ್ಲಿ ಭಾಜಪ ರಾಷ್ಟ್ರಿಯ ಯುವ ಮೋರ್ಚಾ ಅಧ್ಯಕ್ಷ  ತೇಜಸ್ವಿ ಸೂರ್ಯ  ಮಾತನಾಡಿ ಲೋಕ ಸಮಸ್ತಾ ಸುಖಿನೋ ಭವಂತು ಎಂಬ ವೇದವಾಕ್ಯದಂತೆ ಬ್ರಾಹ್ಮಣರು ಲೋಕದ ಹಿತಕ್ಕಾಗಿ ಪ್ರಾರ್ಥಿಸುತ್ತಾರೆ, ಬ್ರಾಹ್ಮಣರು ಸರ್ಕಾರಿ ಸವಲತ್ತು ಪಡೆಯಬೇಕಾದರೆ ಸ್ವಾಭಿಮಾನಿಯಾಗದೇ ಸಂಘಟನಾ ಮನೋಭಾವ ಬೆಳಸಿಕೊಳ್ಳಲು ಮುಂದಾಗಬೇಕು. ನವದೆಹಲಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ರಸ್ತೆ 7 ರೇಸ್ ಕೋರ್ಸ್ ರಸ್ತೆಯನ್ನು 7ಲೋಕಕಲ್ಯಾಣ್ ಮಾರ್ಗ್ ಎಂದು ಬದಲಾವಣೆ ಮಾಡಿದ್ದು ಹರ್ಷ ತಂದಿದೆ.  ಮೈಸೂರು ಬ್ರಾಹ್ಮಣ ಯುವ ವೇದಿಕೆ ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಮೈಸೂರಿನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಬ್ರಾಹ್ಮಣ ಯುವ ಸಮಾವೇಶದಲ್ಲಿ ನಾನು ಸಹ ಭಾಗವಹಿಸಿದ್ದೆ. ಅಂದು ತಾವುಗಳು ನೀಡಿದ ಸಹಕಾರ ಆಶೀರ್ವಾದ ನಾನು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಪ್ರೇರೇಪಣೆಯಾಯಿತು, ಕರ್ನಾಟಕದಲ್ಲಿ ಬ್ರಾಹ್ಮಣ ಯುವ ಸಮುದಾಯ ಸಂಘಟನಾತ್ಮಕವಾಗಿ ಒಗ್ಗೂಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು,

ಕಾರ್ಯಕ್ರಮದಲ್ಲಿ ಕೃಷ್ಣಮೂರ್ತಿಪುರಂ ಶ್ರೀರಾಮಮಂದಿರದ ಅಧ್ಯಕ್ಷರಾದ   ಇಳೈ ಆಳ್ವಾರ್ ಸ್ವಾಮೀಜಿ, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ ಪ್ರಕಾಶ್, ಕರ್ನಾಟಕ ಸರ್ಕಾರ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕರಾದ ಎಂ ಆರ್ ಬಾಲಕೃಷ್ಣ ,‌ ನಗರ ಪಾಲಿಕೆ ಸದಸ್ಯರಾದ ಮಾವಿ ರಾಮಪ್ರಸಾದ್ ,ಮೈಸೂರು ಜಿಲ್ಲಾ ಬ್ರಾಹ್ಮಣ ಯುವೇದಿಕೆಯ ಗೌರವ ಅಧ್ಯಕ್ಷರಾದ ಮುಳ್ಳೂರು ಗುರುಪ್ರಸಾದ್ ,ಬ್ರಾಹ್ಮಣ ಯುವ ವೇದಿಕೆಯ ಅಧ್ಯಕ್ಷರಾದ ಎಚ್ ಎನ್ ಶ್ರೀಧರ್ ಮೂರ್ತಿ ,ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ,ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ , ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ.ಆರ್ ಸತ್ಯನಾರಾಯಣ್, ಪಾರ್ಥಸಾರಥಿ, ಗ್ರಾಮಾಂತರ ಅಧ್ಯಕ್ಷರಾದ ಗೋಪಾಲ್ ರಾವ್ , ವಿಜಯಕುಮಾರ್, ಬಿಜೆಪಿ ಯುವ ಮುಖಂಡರಾದ ಕೆಎಂ.ನಿಶಾಂತ್ ,ರಾಕೇಶ್ ಭಟ್ , ಸುಚೀಂದ್ರ, ವಿಕಾಸ್ ಶಾಸ್ತ್ರಿ, ಟಿ ಎಸ್. ಅರುಣ್, ಚಕ್ರಪಾಣಿ, ನಾಗಶ್ರೀ, ಜ್ಯೋತಿ, ರಂಗನಾಥ್, ಜಯಸಿಂಹ ,ಪ್ರಶಾಂತ್ ,ಅಶ್ವಿನ್ ಕೌಂಡಿನ್ಯ   ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: