ಕರ್ನಾಟಕಪ್ರಮುಖ ಸುದ್ದಿ

ದ್ವಿಚಕ್ರವಾಹನಕ್ಕೆ ಬಸ್ ಡಿಕ್ಕಿ : ಪೊಲೀಸ್ ಕಾನ್ಸಟೇಬಲ್ ಸಾವು

ರಾಜ್ಯ(ಮಂಡ್ಯ)ಮಾ.29:- ಕೆಎಸ್ ಆರ್ ಟಿಸಿ ಬಸ್ಸೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪೊಲೀಸ್ ಕಾನ್ಸಟೇಬಲ್ ಓರ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಂಡ್ಯ ತಾಲೂಕಿನ ಬಸರಾಳು ಬಳಿ ಸಂಭವಿಸಿದೆ.

ಮೃತರನ್ನು 50 ವರ್ಷದ ವೆಂಕಟೇಶ್ ಎಂದು ಹೇಳಲಾಗಿದೆ. ನಾಗಮಂಗಲ ಗ್ರಾಮಾಂತರ ಠಾಣೆಯಲ್ಲಿ ಹೆಡ್ ಕಾನ್ ಸ್ಟೇಬಲ್ ಆಗಿದ್ದ ವೆಂಕಟೇಶ್ ಅವರು ರಾತ್ರಿ ಚುಂಚನಗಿರಿಯ ಜಾತ್ರೆಯ ಕರ್ತವ್ಯ ಮುಗಿಸಿ ವಾಪಸ್ಸು ಬರುವಾಗ ಅಪಘಾತ ಸಂಭವಿಸಿದೆ.

ಅಪಘಾತ ಸ್ಥಳಕ್ಕೆ ಬರಸಾಳು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹವನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನಿಸಿ, ಬಳಿಕ ಕುಟುಂಬಿಕರಿಗೆ ಹಸ್ತಾಂತರಿಸಿದ್ದಾರೆ.

Leave a Reply

comments

Related Articles

error: