ಮೈಸೂರು

ವಾಣಿವಿಲಾಸ ಅರಸು ಮಹಿಳಾ ಪದವಿ ಕಾಲೇಜಿನ ವಾರ್ಷಿಕೋತ್ಸವ

ಮೈಸೂರಿನ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಶ್ರೀಜಯಚಾಮರಾಜ ಅರಸು ಎಜ್ಯುಕೇಷನ್ ಟ್ರಸ್ಟ್ ಶ್ರೀ ವಾಣಿವಿಲಾಸ ಅರಸು ಮಹಿಳಾ ಪದವಿ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ಶುಕ್ರವಾರ ಜರುಗಿತು.

ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಡಾ.ಎಸ್.ಶ್ರೀಕಂಠಸ್ವಾಮಿ ಒಡೆಯರ್ ಭಾವಚಿತ್ರಗಳಿಗೆ ಪುಷ್ಪಾರ್ಚನೆಗೈಯ್ದು ಗೌರವ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳು ಯಾವ ರೀತಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ತಮ್ಮನ್ನು ತೊಡಗಿಸಿಕೊಳ್ಳಬೇಕೆನ್ನುವ ಕುರಿತು ವಿವರಿಸಿದರು.

ಈ ಸಂದರ್ಭ ಶ್ರೀಜಯಚಾಮರಾಜ ಅರಸು ಎಜ್ಯುಕೇಷನ್ ಟ್ರಸ್ಟ್ ಉಪಾಧ್ಯಕ್ಷೆ ಡಾ. ಭಾರತಿ ಶ್ರೀಧರ ರಾಜ್ ಅರಸ್, ಹಾಗೂ ಆಡಳಿತ ಮಂಡಳಿಯ ಟ್ರಸ್ಟಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ವಿಜೃಂಭಣೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. (ಎಸ್.ಎಚ್)

Leave a Reply

comments

Related Articles

error: