ದೇಶಪ್ರಮುಖ ಸುದ್ದಿ

ದೇಶದ ಜನತೆಗೆ ಹೋಳಿ ಹಬ್ಬ ಹೊಸ ಚೈತನ್ಯ ತುಂಬಲಿ; ಪ್ರಧಾನಿ ಮೋದಿ ಹಾರೈಕೆ

ದೇಶ(ನವದೆಹಲಿ)ಮಾ.29:- ಬಣ್ಣಗಳ ಹಬ್ಬವಾದ ಹೋಳಿಯನ್ನು ದೇಶದಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಎಲ್ಲಾ ಸಾಮಾನ್ಯ ಮತ್ತು ವಿಶೇಷ ಮಂದಿ ಈ ಬಣ್ಣಗಳ ಹಬ್ಬವನ್ನು ಉತ್ಸಾಹದಿಂದ ಆಚರಿಸುತ್ತಿದ್ದಾರೆ. ಕೊರೋನಾ ಸೋಂಕಿನಿಂದಾಗಿ ಜನರು ಈ ಬಾರಿ ಎಚ್ಚರಿಕೆಯಿಂದ ಹೋಳಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಈ ಹಬ್ಬವನ್ನು ಆಚರಿಸಲು ಸರ್ಕಾರವು ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಹೋಳಿ ಹಬ್ಬಕ್ಕೆ ದೇಶದ ಜನತೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಹೋಳಿ ಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ ತಮ್ಮ ಟ್ವೀಟ್‌ ನಲ್ಲಿ “ನಿಮ್ಮೆಲ್ಲರಿಗೂ  ಹೋಳಿ ಹಬ್ಬದ  ಶುಭಾಶಯಗಳನ್ನು ಕೋರುತ್ತೇನೆ.   ಆನಂದ, ಉಲ್ಲಾಸ, ಉತ್ಸಾಹ, ಸಂತೋಷದ ಈ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಹೊಸ ಚೈತನ್ಯ ಮತ್ತು ಹೊಸ ಶಕ್ತಿಯನ್ನು ತುಂಬಲಿ’ ಎಂದು ಶುಭ ಹಾರೈಸಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: