ಮೈಸೂರು

ಡಾ.ರಾಜ್ ಹುಟ್ಟು ಹಬ್ಬದಂಗವಾಗಿ ಸಂಗೀತ ರಸ ಸಂಜೆ : ‘ಏ.24ಕ್ಕೆ’

ಮೈಸೂರಿನ ಮಧುರಗಾನ ಕಲಾವೃಂದದವರಿಂದ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಹುಟ್ಟು ಹಬ್ಬದಂಗವಾಗಿ ವಿಶೇಷ ಸಂಗೀತ ರಸಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಮೇಶ್ ಕುಮಾರ್ ತಿಳಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರಿಸಿ ಏ.24ರಂದು ಸಂಜೆ 5.30ಕ್ಕೆ ಜಗನ್ಮೋಹನ ಅರಮನೆಯ ಸಭಾಂಗಣದಲ್ಲಿ ನಡೆಯುವ ಡಾ.ರಾಜ್ ಕುಮಾರ್ ಹಾಗೂ ಮಂಜುಳ ಎರಡು ನಕ್ಷತ್ರಗಳ ರಸಸಂಜೆ ಕಾರ್ಯಕ್ರಮಕ್ಕೆ ನಿರ್ದೇಶಕ ಭಾರ್ಗವ ಚಾಲನೆ ನೀಡುವರು ಎಂದು ತಿಳಿಸಿದರು.  ಕಲಾವೃಂದದಿಂದ 2014 ರಿಂದಲೂ ನಿರಂತರವಾಗಿ ವರ್ಷಕ್ಕೆರಡು ರಸಸಂಜೆ  ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು ಪ್ರವೇಶವು ಸಂಪೂರ್ಣ ಉಚಿತವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ  ರಾಜೇಶ್ವರಿ ರಮೇಶ್ ಕುಮಾರ್, ಸುದೀಂದ್ರ, ನಟರಾಜ್ ಹಾಗೂ ನಿರ್ಮಾಪಕ ಟಿ.ಎನ್.ವೆಂಕಟೇಶ್ ಹಾಜರಿದ್ದರು. (ಕೆ.ಎಂ.ಆರ್-ಎಸ್.ಎಚ್)

Leave a Reply

comments

Related Articles

error: