ಮೈಸೂರು

ಲಯನ್ಸ್ ಸಂಸ್ಥೆ ಜಿಲ್ಲಾ ಸಮ್ಮೇಳನ ‘ಏ.23’

ಲಯನ್ಸ್ ಅಂತರರಾಷ್ಟ್ರೀಯ ಸಂಸ್ಥೆಯ ಶತಮಾನೋತ್ಸವದಂಗವಾಗಿ ಮೈಸೂರಿನ ಲಯನ್ಸ್ ಸಂಸ್ಥೆಯಿಂದ ‘ಸಾರ್ಥಕ ಶತಕ’ ಜಿಲ್ಲಾ ವಾರ್ಷಿಕ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ತಿಳಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮೈಸೂರಿನ ಲಯನ್ಸ್ ಸಂಸ್ಥೆಯ 41ನೇ ಜಿಲ್ಲಾ ವಾರ್ಷಿಕೋತ್ಸವವನ್ನು ಏ.23ರಂದು  ಬೆಳಿಗ್ಗೆ 10ಕ್ಕೆ ಹೆಬ್ಬಾಳ ಹೊರ ವರ್ತುಲದ ಶುಭೋದಿನಿ ಕನ್ವೆನ್ಶನ್ ಸೆಂಟರ್ನಲ್ಲಿ ಹಮ್ಮಿಕೊಳ್ಳಲಾಗಿದ್ದು, ಡಾ.ಭಾಷ್ಯಂ ಸ್ವಾಮೀಜಿ ಉಪಸ್ಥಿತರಿರುವರು.  ಶತಮಾನೋತ್ಸವ ಸ್ಮರಣಾರ್ಥ ಅಂದು ಬೆಳಿಗ್ಗೆ 8.30 ರಿಂದ ಕೃತಕ ಕಾಲು ಜೋಡಣೆ, ಆಂಬ್ಯುಲೆನ್ಸ್ ದೇಣಿಗೆ ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು. ಸಮ್ಮೇಳನದಲ್ಲಿ ಲಯನ್ಸ್ ಅಂತರರಾಷ್ಟ್ರೀಯ ನಿರ್ದೇಶಕ ವಿಜಯಕುಮಾರ್ ರಾಜು ವೆಜೆಸ್ನಾ, ವಿ.ವಿ.ಕೃಷ್ಣರೆಡ್ಡಿ ಹಾಗೂ ಇತರರು ಪಾಲ್ಗೊಳ್ಳುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಭಾಸ್ಕರ್ ಹೆಗ್ಡೆ, ಖಜಾಂಚಿ ಮೋಹನ್, ಎಂ.ಸಿ. ಬನ್ಸಾಲೆ ಹಾಗೂ ಇತರರು  ಉಪಸ್ಥಿತರಿದ್ದರು. (ಕೆ.ಎಂ.ಆರ್-ಎಸ್.ಎಚ್)

 

Leave a Reply

comments

Related Articles

error: