ಪ್ರಮುಖ ಸುದ್ದಿಮೈಸೂರು

ನೀಲಗಿರಿ ಕ್ಷೇತ್ರದ ಅಭ್ಯರ್ಥಿಪರವಾಗಿ ಮತಯಾಚನೆ

ಮೈಸೂರು/ಊಟಿ,ಮಾ.30:- ಇಂದು ತಮಿಳುನಾಡಿನ ನೀಲಗಿರಿ(ಊಟಿ) ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ  ಅಭ್ಯರ್ಥಿ ಎಂ ಭೋಜರಾಜನ್ ಪರವಾಗಿ ಊಟಿಯಲ್ಲಿ  ಮನೆ ಮನೆಗೆ ತೆರಳಿ   ಮೈಸೂರು ನಗರ ಬಿಜೆಪಿ ವತಿಯಿಂದ ಚುನಾವಣಾ ಪ್ರಚಾರ  ಮಾಡಲಾಯಿತು.

ಪ್ರಚಾರವು ಮೈಸೂರು ನಗರದ ಅಧ್ಯಕ್ಷರಾದಂತಹ  ಟಿ.ಎಸ್ ಶ್ರೀವತ್ಸ ಅವರ ನೇತೃತ್ವದಲ್ಲಿ ತಂಡದಲ್ಲಿ ಮೈಸೂರು ನಗರದ ಪ್ರಧಾನ ಕಾರ್ಯದರ್ಶಿಯಾದ   ವಾಣಿಶ್  ಕುಮಾರ್, ಮೈಸೂರು ನಗರ ಪಾಲಿಕೆ ಸದಸ್ಯರಾದ ಆರ್ ಕೆ ಶರತ್, ರೈತ ಮೋರ್ಚಾ ಅಧ್ಯಕ್ಷರಾದ ದೇವರಾಜ್, ರಾಜ್ಯ ರೈತ ಮೋರ್ಚಾ ಸದಸ್ಯರಾದ ಮಂಜುನಾಥ್, ಕಾರ್ಯಕಾರಣಿ ಸದಸ್ಯರಾದ ರಘು  ಹಾಗೂ ಸ್ಥಳೀಯ ಕಾರ್ಯಕರ್ತರಾದ ಸುಧಾಕರ್, ಮಹಿಳಾ ಮೋರ್ಚಾ ಅಧ್ಯಕ್ಷರಾದ ಜ್ಯೋತಿ ಮತ್ತಿತರರು ಭಾಗವಹಿಸಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: