ಮೈಸೂರು

ಪಾಲಿಕೆಯ ವಲಯ ಆಯುಕ್ತರ ಕರ್ತವ್ಯಕ್ಕೆ ಅಡ್ಡಿ : ಪಿಜಿ ಮಾಲಿಕನ ಬಂಧನ

ಮೈಸೂರಿನ ಸರಸ್ವತಿಪುರಂನಲ್ಲಿರುವ ಕಾಮಾಕ್ಷಿ ಆಸ್ಪತ್ರೆ ಸಮೀಪದ ರೋಟರಿ ಶಾಲೆ ಎದುರು ಇರುವ ಅನಧಿಕೃತ ಪಿಜಿಯೊಂದಕ್ಕೆ ಮೈಸೂರು ವಲಯ ಮೂರರ ಆಯುಕ್ತೆ ರೂಪಾ ನೇತೃತ್ವದ ತಂಡ ಗುರುವಾರ ಮಧ್ಯಾಹ್ನ ದಾಳಿ ನಡೆಸಿದ ಸಂದರ್ಭ ಅಧಿಕಾರಿಗೆ ಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲಿ ಪಿಜಿ ಮಾಲಕನನ್ನು ಬಂಧಿಸಲಾಗಿದೆ.

ಗುರುವಾರ ಆಯುಕ್ತೆ ರೂಪಾ ನೇತೃತ್ವದ ತಂಡ  ಪಿಜಿಯ ಮೇಲೆ ದಾಳಿ ನಡೆಸುತ್ತಿದ್ದಂತೆ ಅನಿಲ್ ಆಯುಕ್ತರ  ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಲ್ಲದೇ ನನಗೆ ರಾಜಕೀಯ ಮುಖಂಡರ ಪರಿಚಯವಿದೆ, ಮೇಲಧಿಕಾರಿಗಳ ಪರಿಚಯವಿದೆ ಎಂದೆಲ್ಲ ಹೇಳಿ ಧಮ್ಕಿ ಹಾಕಿದ್ದರು. ಈ ಕುರಿತು ಆಯುಕ್ತರು ಸರಸ್ವತಿಪುರಂ ಠಾಣೆಯಲ್ಲಿ  ಅನಿಲ್  ವಿರುದ್ಧ ದೂರು ದಾಖಲಿಸಿದ್ದರು.

ಇದೀಗ ಸರಸ್ವತಿಪುರಂ ಠಾಣೆಯ ಪೊಲೀಸರು ಅನಿಲ್ ನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕೊಪ್ಪಿಸಿದ್ದಾರೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: