ದೇಶಪ್ರಮುಖ ಸುದ್ದಿಮನರಂಜನೆ

ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಟಿವಿ ಶೋ ‘ಡ್ಯಾನ್ಸ್ ದಿವಾನೆ’ 18 ಸಿಬ್ಬಂದಿಗಳಿಗೆ ಕೊರೋನಾ ಸೋಂಕು

ದೇಶ(ಮುಂಬೈ)ಮಾ.31:- ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಟಿವಿ ಶೋ ‘ಡ್ಯಾನ್ಸ್ ದಿವಾನೆ’ ಮೂರನೇ ಸೀಸನ್ ಮೂಲಕ ಈ ವರ್ಷದ ಟಿವಿ ಜಗತ್ತಿಗೆ ಮರಳಿದರು. ಕಲರ್ಸ್ ವಾಹಿನಿಯಲ್ಲಿ ಬಿಡುಗಡೆಯಾದ ‘ಡ್ಯಾನ್ಸ್ ದಿವಾನೆ’ ಹೊಸ ಸೀಸನ್ ಈ ವರ್ಷದ ಫೆಬ್ರವರಿಯಲ್ಲಿ ಅದ್ಭುತವಾಗಿ ಲಾಂಚ್ ಮಾಡಲಾಯಿತು. ಆದರೆ ಈ ವಾರಾಂತ್ಯದಲ್ಲಿ ಕಾರ್ಯಕ್ರಮದ ಚಿತ್ರೀಕರಣಕ್ಕೆ ಮುಂಚಿತವಾಗಿ ಎಲ್ಲಾ ಪಾತ್ರವರ್ಗ ಮತ್ತು ಸಿಬ್ಬಂದಿ ಸದಸ್ಯರ ಕೊರೋನಾ ಪರೀಕ್ಷೆಯನ್ನು ತೆಗೆದುಕೊಂಡಾಗ, ಪ್ರದರ್ಶನಕ್ಕೆ ಸಂಬಂಧಿಸಿದ 18 ಸಿಬ್ಬಂದಿ ಸದಸ್ಯರಲ್ಲಿ ಕೊರೋನಾ ವರದಿಯು ಪಾಸಿಟಿವ್ ಬಂದಿದೆ. ಎಲ್ಲಾ 18 ಸಿಬ್ಬಂದಿಗಳು ಪ್ರಸ್ತುತ ಹೋಂ ಕ್ವಾರೆಂಟೈನ್ ನಲ್ಲಿದ್ದಾರೆ.
ಮಾಧುರಿ ದೀಕ್ಷಿತ್ ಅವರಲ್ಲದೆ ಪ್ರದರ್ಶನದಲ್ಲಿ ಧರ್ಮೇಶ್ ಮತ್ತು ತುಷಾರ್ ಕಾಲಿಯಾ ತೀರ್ಪುಗಾರರಾಗಿದ್ದು, ರಾಘವ್ ಜುಯೆಲ್ ಕಾರ್ಯಕ್ರಮವನ್ನು ಹೋಸ್ಟ್ ಮಾಡುತ್ತಾರೆ. ಆದರೆ ಇವರಲ್ಲಿ ಯಾರಿಗೂ ಕೊರೋನಾ ಇರುವುದು ವರದಿಯಾಗಿಲ್ಲ, ಇದು ಪ್ರದರ್ಶಕರು ಮತ್ತು ಚಾನೆಲ್‌ ಗೆ ಸಮಾಧಾನಕರ ವಿಷಯವಾಗಿದೆ.
ವೆಸ್ಟರ್ನ್ ಇಂಡಿಯಾ ಸಿನಿ ನೌಕರರ (ಎಫ್‌ವೈಸಿಇಇ) ಪ್ರಧಾನ ಕಾರ್ಯದರ್ಶಿ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದು, ಕೊರೋನಾದಿಂದ ಬಳಲುತ್ತಿರುವ 18 ಸಿಬ್ಬಂದಿಗಳು ಬಳಲುತ್ತಿರುವುದು ನಿಜ. ಆದರೆ ಕಾರ್ಯಕ್ರಮದ ಮೂವರು ತೀರ್ಪುಗಾರರು, ಮತ್ತು ಹೋಸ್ಟ್ ಯಾರೊಬ್ಬರಲ್ಲಿಯೂ ಕೊರೋನಾಸೋಂಕಿಲ್ಲ. ಒಂದೇ ಪ್ರದರ್ಶನದ ಸೆಟ್ ನಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಮಂದಿಗೆ ಕೊರೋನಾ ಪಾಸಿಟಿವ್ ಆಗಿರುವುದು ಬಹಳ ವಿಷಾದನೀಯ ಮತ್ತು ಎಲ್ಲರೂ ಮುನ್ನೆಚ್ಚರಿಕೆ ವಹಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: