ಕರ್ನಾಟಕಮನರಂಜನೆ

ರಿಯಲ್ ಲೈಫ್ ನಲ್ಲೂ ಒಂದಾಗಲಿದ್ದಾರಾ `ಲಕ್ಷ್ಮಿ ಬಾರಮ್ಮ’ ಧಾರಾವಾಹಿಯ ಚಂದನ್ ಕುಮಾರ್, ಕವಿತಾ ಗೌಡ?

ಬೆಂಗಳೂರು,ಮಾ.31-`ಲಕ್ಷ್ಮಿ ಬಾರಮ್ಮ’ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ದ ಚಂದನ್ ಕುಮಾರ್, ಕವಿತಾ ಗೌಡ ನಿಜಜೀವನದಲ್ಲೂ ಒಂದಾಗುತ್ತಿದ್ದಾರಾ ಎಂಬ ಅನುಮಾನ ಮೂಡಿದೆ.

ಚಂದನ್ ಕುಮಾರ್, ಕವಿತಾ ಗೌಡ ಜೊತೆಗಿನ ರೊಮ್ಯಾಂಟಿಕ್ ಫೋಟೋವನ್ನು ಪೋಸ್ಟ್ ಮಾಡಿ ‘ಏಪ್ರಿಲ್ 1 ರಂದು ಮೂರ್ಖರಾಗುತ್ತಿದ್ದೇವೆ’ ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿ ಇವರಿಬ್ಬರು ನಾಳೆ ಎಂಗೇಜ್ ಆಗುತ್ತಿದ್ದಾರಾ ಎಂಬ ಸಂದೇಹ ಮೂಡಿದೆ.

ಚಂದನ್ ಅವರು ಪೋಸ್ಟ್ ಹಾಕಿದ ಕೆಲವೇ ನಿಮಿಷಗಳಲ್ಲಿ ನಟಿ ಶ್ವೇತಾ ಚೆಂಗಪ್ಪ ಸೇರಿದಂತೆ ಅನೇಕ ಸೆಲೆಬ್ರಿಟಿಗಳು, ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಅವುಗಳಿಗೆಲ್ಲ ಚಂದನ್ ಧನ್ಯವಾದ ತಿಳಿಸಿದ್ದಾರೆ.

ಲಕ್ಷ್ಮಿ ಬಾರಮ್ಮ ಧಾರಾವಾಹಿಯಿಂದಲೂ ಇವರಿಬ್ಬರು ಸ್ನೇಹಿತರು. ಇಬ್ಬರು ಬಹಳ ಆತ್ಮೀಯರಾಗಿದ್ದರು. ಟ್ರೆಕ್ಕಿಂಗ್, ಪ್ರವಾಸ, ಹೋಟೆಲ್‌ ಹೀಗೆ ಹಲವು ಕಡೆ ಒಟ್ಟಿಗೆ ಸುತ್ತಾಡುತ್ತಿರುತ್ತಾರೆ. ಕವಿತಾ ಗೌಡ ಬರ್ತಡೇ ದಿನ ಚಂದನ್ ಅವರು ಮಧ್ಯರಾತ್ರಿ ಕವಿತಾ ಮನೆಗೆ ತೆರಳಿ ಸರ್ಪ್ರೈಸ್ ನೀಡಿದ್ದರು. ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದರು. ಈ ಫೋಟೋಗಳನ್ನು ನೋಡಿ ಇವರಿಬ್ಬರು ಪ್ರೀತಿ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಚಂದನ್ ಹಾಗೂ ಕವಿತಾ ನಾವಿಬ್ಬರೂ ಸ್ನೇಹಿತರು ಅಂತ ಹೇಳಿದ್ದರು. ಹೀಗಾಗಿ ನಿಜಕ್ಕೂ ಇವರಿಬ್ಬರು ನಾಳೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆಯೇ ಎಂಬ ಸಂದೇಹ ಮೂಡಿದೆ. ಸಂದೇಹ ಬಗೆಹರಿಯುವಿಕೆಗಾಗಿ ನಾಳೆವರೆಗೂ ಕಾಯಲೇ ಬೇಕಿದೆ.

ಚಂದನ್ ಕುಮಾರ್, ಕವಿತಾ ಗೌಡ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಿದ್ದು, ಚಂದನ್ ಕುಮಾರ್ ಇತ್ತೀಚೆಗಷ್ಟೆ ಬಿರಿಯಾನಿ ಹೋಟೆಲ್ ಸಹ ಆರಂಭಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: