ಕರ್ನಾಟಕಪ್ರಮುಖ ಸುದ್ದಿ

ಉಡಾನ್ ನೆರವಿನೊಂದಿಗೆ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸಹಿ

ಬೆಂಗಳೂರು : ಕೇಂದ್ರ ಸರ್ಕಾರವು ದೇಶೀಯ ವಿಮಾನಯಾನ ಉತ್ತೇಜನಕ್ಕಾಗಿ ಆರಂಭಿಸಲಿರುವ ಉಡಾನ್ ಯೋಜನೆಯ ನೆರವಿನೊಂದಿಗೆ ಕರ್ನಾಟಕದ ಮೈಸೂರು, ಬೀದರ್ ಮತ್ತು ಬಳ್ಳಾರಿ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.

ನಾಗರಿಕ ವಿಮಾನಯಾನ ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರದ ಜೊತೆಗೆ ರಾಜ್ಯ ಸರ್ಕಾರವು ತಿಳುವಳಿಕೆ ಪತ್ರಕ್ಕೆ (MoU) ಸಹಿ ಹಾಕಿದೆ. ಸ್ಥಳೀಯ ಸಂಪರ್ಕ ಯೋಜನೆಯಡಿ ವಿಮಾನ ಸೇವೆಗಳನ್ನು ರಿಯಾಯಿತಿ ಮತ್ತು ಪ್ರೋತ್ಸಾಹ ಧನಗಳೊಂದಿಗೆ ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ನಿಲುವಳಿ ಒಪ್ಪಂದ ಮಾಡಿಕೊಳ್ಳಲಿವೆ. ಏವಿಯೇಷನ್ ಟರ್ಬೈನ್ ಇಂಧನದ ಮಾರಾಟ ತೆರಿಗೆಯಲ್ಲಿ ರಿಯಾಯಿತಿ, ವಿಮಾನ ನಿಲ್ದಾಣಗಳ ಅಭಿವೃದ್ಧಿ ಮತ್ತು ವಿಸ್ತರಣೆ, ವಿಮಾನಯಾನ ನಿಧಿ ಸ್ಥಾಪನೆ – ಈ ಎಲ್ಲ ಕಾರ್ಯಗಳನ್ನು ಕೇಂದ್ರ ಸರ್ಕಾರ ಶೇಕಡಾ 80 ಮತ್ತು ರಾಜ್ಯ ಸರ್ಕಾರ ಶೇಕಡಾ 20ರಷ್ಟು ಪಾಲುದಾರಿಕೆಯಲ್ಲಿ ಕೈಗೊಳ್ಳಲಿವೆ.

ಮುಂದಿನ ಸುತ್ತಿನ ಹರಾಜಿನಲ್ಲಿ ಇನ್ನಷ್ಟು ವಿಮಾನ ನಿಲ್ದಾಣಗಳನ್ನು ಸ್ಥಳೀಯ ಸಂಪರ್ಕ ಯೋಜನೆಯಡಿ ತರಲಾಗುವುದು ಎಂದು ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದ ರನ್ ವೇಯನ್ನು ವಿಸ್ತರಿಸುವುದು ಮತ್ತು ಬೆಳಗಾವಿ, ಹುಬ್ಬಳ್ಳಿ ಮತ್ತು ಮೈಸೂರು ವಿಮಾನ ನಿಲ್ದಾಣ ಅಭಿವೃದ್ಧಿಗೆ ಸಂಬಂಧಪಟ್ಟ ವಿಷಯಗಳ ಕುರಿತು ನಮ್ಮ ಅಧಿಕಾರಿಗಳು ನಾಗರಿಕ ವಿಮಾನ ಯಾನ ಕಾರ್ಯದರ್ಶಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಬೀದರ್ ವಿಮಾನ ನಿಲ್ದಾಣದಿಂದ ಕಾರ್ಯನಿರ್ವಹಿಸುವ ವಿಮಾನಗಳಿಗೆ ಸಂಬಂಧಪಟ್ಟ ದೂರುಗಳಿಗೆ ಶೀಘ್ರದಲ್ಲೇ ಪರಿಹಾರ ಒದಗಿಸಲಾಗುವುದು ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು “ಉಡಾನ್” ಯೋಜನೆಗೆ ಶಿಮ್ಲಾ ವಿಮಾನ ನಿಲ್ದಾಣದ ಜುಬ್ಬರ್ ಹಟ್ಟಿಯಲ್ಲಿ ಏಪ್ರಿಲ್ 27 ರಂದು ಚಾಲನೆ ನೀಡುವರು.

Leave a Reply

comments

Related Articles

error: