ಕರ್ನಾಟಕಪ್ರಮುಖ ಸುದ್ದಿ

ಮುಂದಿನ ಅವಧಿಗೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗೋದನ್ನು ಎಲ್ಲರೂ ಒಪ್ಪುತ್ತಾರೆ : ಎಂ.ಬಿ.ಪಾಟೀಲ್

ಸಿಎಂ ಸಿದ್ದರಾಮಯ್ಯ  ಮುಂದಿನ ಅವಧಿಗೂ ಸಿಎಂ ಆಗೋದು ಬಹುತೇಕ ಎಲ್ಲರೂ ಒಪ್ಪುತ್ತಾರೆ  ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಮುಂದೆಯು ನಾನೇ ಸಿಎಂ ಆಗುವೆ  ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಹೇಳಿಕೆಗೆ ಅವರ ಪರವಾಗಿಯೇ ಮಾತನಾಡಿದ್ದಾರೆ. ಮುಖ್ಯಮಂತ್ರಿಗಳ  ನಾಯಕತ್ವದಲ್ಲಿ ಚುನಾವಣೆಗೆ ನಡೆಯುತ್ತಿರುವುದರಿಂದ ಸ್ವಾಭಾವಿಕವಾಗಿ ಮುಂದೆಯೂ  ಅವರೆ  ಮುಖ್ಯಮಂತ್ರಿಗಳಾಗುತ್ತಾರೆ. ಸಿದ್ದರಾಮಯ್ಯ ನೇತ್ರತ್ವದಲ್ಲೇ ಮುಂದಿನ ಚುನಾವಣೆ ನಾವು ಎದುರಿಸುತ್ತೇವೆ ಎಂದಿದ್ದಾರೆ.ಕಾಂಗ್ರೆಸ್ ಪಕ್ಷದಲ್ಲಿ ಮೂಲ ಕಾಂಗ್ರೆಸಿಗ ಹಾಗೂ ವಲಸಿಗ ಕಾಂಗ್ರೆಸಿಗ ಎಂಬುದಾಗಿ ಇಲ್ಲ. ನಮ್ಮ ಪಕ್ಷದಿಂದ ಅವರು ಮುಖ್ಯಮಂತ್ರಿಗಳಾದ ಮೇಲೆ ಮೂಲ ಕಾಂಗ್ರೆಸಿಗ ಹಾಗೂ ವಲಸಿಗ ಕಾಂಗ್ರೆಸ್ ಎನ್ನುವ ವಿಚಾರ ಬರುವುದಿಲ್ಲ. ಅಂತಿಮವಾಗಿ ಮುಖ್ಯಮಂತ್ರಿಗಳು ಯಾರು ಆಗಬೇಕು ಅನ್ನುವುದನ್ನು ಹೈಕಮಾಂಡ್ ಹಾಗೂ ಶಾಸಕಾಂಗ ಸಭೆ ತೀರ್ಮಾನ ಮಾಡಲಿದೆ ಎಂದಿದ್ದಾರೆ. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: