ಮನರಂಜನೆ

ಕೊನೆಗೂ ಕನ್ನಡಿಗರ ಕ್ಷಮೆಯಾಚಿಸಿದ ಕಟ್ಟಪ್ಪ

9 ವರ್ಷಗಳ ಹಿಂದೆ ಕಾವೇರಿ ನದಿ ವಿವಾದದ ಸಂದರ್ಭದಲ್ಲಿ ಕನ್ನಡಿಗರ ವಿರುದ್ಧ  ಅವಹೇಳನಕಾರಿಯಾಗಿ ಮಾತನಾಡಿದ್ದ ತಮಿಳು ನಟ, ನಿರ್ದೇಶಕ ಸತ್ಯರಾಜ್  ಕೊನೆಗೂ ಕನ್ನಡಿಗರ ಹೋರಾಟಕ್ಕೆ ತಲೆಬಾಗಿ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದಾರೆ.

ಈ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿರುವ ಅವರು, ನಾನು ಎಂದಿಗೂ ಕನ್ನಡ ವಿರೋಧಿಯಲ್ಲ. ಕಾವೇರಿ ನದಿ ವಿವಾದದ ಸಂದರ್ಭದಲ್ಲಿ ನಾನು ಪ್ರಚೋದನೆಗೊಂಡು ಭಾಷಣ ಮಾಡಿದ್ದೆ. ಅದರಿಂದ ಕನ್ನಡ ಭಾಷಿಗರಿಗೆ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಇದರ ಜತೆಗೆ ಕರ್ನಾಟಕದಲ್ಲಿ ‘ಬಾಹುಬಲಿ-2’ ಚಿತ್ರ ಪ್ರದರ್ಶನಕ್ಕೆ ಅನುವು ಮಾಡಿಕೊಡಬೇಕೆಂದು ವಿನಂತಿಸಿಕೊಂಡಿದ್ದಾರೆ. (ಎಲ್.ಜಿ)

 

Leave a Reply

comments

Related Articles

error: