ಕರ್ನಾಟಕಪ್ರಮುಖ ಸುದ್ದಿ

ಸಿಡಿ ಪ್ರಕರಣ: ಮೂರು ದಿನದಿಂದ ರಮೇಶ್ ಜಾರಕಿಹೊಳಿ ನಾಪತ್ತೆ

ಬೆಂಗಳೂರು,ಏ.1-ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಳೆದ ಮೂರು ದಿನಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅಜ್ಞಾತ ಸ್ಥಳದಲ್ಲಿದ್ದಾರೆ.

ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ನ್ಯಾಯಾಧೀಶರ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದು, ಎಸ್ಐಟಿ ತಂಡದವರು ಆಕೆಯನ್ನು ಆಡುಗೋಡಿಯ ಟೆಕ್ನಿಕಲ್ ಸೆಂಟರ್ ಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ವೈದ್ಯಕೀಯ ಪರೀಕ್ಷೆ ನಡೆದಿದೆ, ಇಂದು ಯುವತಿ ವಾಸವಿದ್ದ ಆರ್​ಟಿ ನಗರದ ಪಿಜಿ, ರಮೇಶ್​ ಜಾರಕಿಹೊಳಿ ಯುವತಿಯನ್ನು ಕರೆಸಿಕೊಂಡಿದ್ದರು ಎನ್ನಲಾದ ಮಲ್ಲೇಶ್ವರಂನ ಅಪಾರ್ಟ್​ಮೆಂಟ್​ ಸ್ಥಳ ಮಹಜರು ಮಾಡಲಾಗಿದೆ.

ಮೂರು ದಿನದಿಂದ ಇಷ್ಟೆಲ್ಲ ಬೆಳವಣಿಗೆಗಳಾಗುತ್ತಿದ್ದರೂ ರಮೇಶ್​ ಮಾತ್ರ ಮಾ.29ರ ರಾತ್ರಿಯಿಂದ ಅಜ್ಞಾತ ಸ್ಥಳದಲ್ಲಿದ್ದಾರೆ. ಯುವತಿ ಹೇಳಿಕೆಯ ಕುರಿತು ಮೌನವಾಗಿದ್ದಾರೆ. ನಿರೀಕ್ಷಣಾ ಜಾಮೀನಿಗೂ ಅರ್ಜಿ ಸಲ್ಲಿಸಿಲ್ಲ. (ಎಂ.ಎನ್)

 

Leave a Reply

comments

Related Articles

error: