ದೇಶಪ್ರಮುಖ ಸುದ್ದಿ

ಕೋಮು ಭಾವನೆ ಕೆರಳಿಸುವ ಪೋಸ್ಟ್ ಮಾಡಿದರೆ ಗ್ರೂಪ್ ನಿರ್ವಹಾಕರಿಗೆ ಜೈಲು ಶಿಕ್ಷೆ

ಲಖ್ನೋ : ಸಾಮಾಜಿಕ ಜಾಲಗಳಾದ ವಾಟ್ಸಪ್, ಫೇಸ್ಬುಕ್ ಗ್ರೂಪ್’ಗಳಲ್ಲಿ ಮಾಡುವ ಆಕ್ಷೇಪಾರ್ಹ ಮತ್ತು ಸುಳ್ಳು ಪೋಸ್ಟ್’ಗಳಿಗೆ ಗ್ರೂಪ್ ನಿರ್ವಾಹಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಮಾತ್ರವಲ್ಲದೇ ಜೈಲು ಶಿಕ್ಷೆ  ಗುರಿಪಡಿಸಲಾಗುವುದು ಎಂದು ಉತ್ತರಪ್ರದೇಶದ ವಾರಾಣಸಿಯಲ್ಲಿ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ ವಾರಾಣಸಿಯ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರು ಈ ಆದೇಶ ಹೊರಡಿಸಿದ್ದು, ಕೋಮು ಭಾವನೆಗಳನ್ನು ಕೆರಳಿಸಿ ಸೌಹಾರ್ದತೆಗೆ ಧಕ್ಕೆ ಉಂಟು ಮಾಡುವ ಪೋಸ್ಟ್, ವಿಡಿಯೋ, ಫೋಟೋಗಳನ್ನು ಹಾಕಿದರೆ ಗ್ರೂಪ್ ನಿರ್ವಾಹಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಈ ಆದೇಶದಲ್ಲಿ ಎಚ್ಚರಿಕೆ ನೀಡಿದ್ದಾರೆ.

ಇಂತಹುದೇ ಒಂದು ಗೊಂದಲಕಾರಿ ಮತ್ತು ದಾರಿ ತಪ್ಪಿಸುವ ಸುದ್ದಿಗಳು ಪೋಸ್ಟ್ ಆಗಿದ್ದ ಗ್ರೂಪ್ನ ನಿರ್ವಾಹಕರ ವಿರುದ್ಧ ಜಿಲ್ಲಾಡಳಿತ ಎಫ್ಐಆರ್ ದಾಖಲಿಸಿದೆ. ಮುಂದೆ ಯಾವುದೇ ಗ್ರೂಪ್ ನಿರ್ವಾಹಕರು ಇಂತಹ ಪ್ರಚೋದನಾತ್ಮಕ ಪೋಸ್ಟ್’ಗಳನ್ನು ನಿರಾಕರಿಸಬೇಕು. ಜೊತೆಗೆ ಅವುಗಳನ್ನು ಗ್ರೂಪ್’ನಿಂದ ತೆಗೆದುಹಾಕಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.

Leave a Reply

comments

Related Articles

error: