ಮೈಸೂರು

ಪರಿಸರ ಸ್ನೇಹಿ ತಂಡದ ವತಿಯಿಂದ ಡಾ.ಶಿವಕುಮಾರ ಸ್ವಾಮೀಜಿ ಯವರ 114ನೆ ಜಯಂತಿ ಅಂಗವಾಗಿ ತ್ರಿವಿಧ ದಾಸೋಹಿ ನಮನ ಕಾರ್ಯಕ್ರಮ ಕ್ಕೆ ಚಾಲನೆ

ಮೈಸೂರು, ಏ.1:-   ಪರಿಸರ ಸ್ನೇಹಿ ತಂಡದ ವತಿಯಿಂದ  ಡಾ. ಶಿವಕುಮಾರ ಸ್ವಾಮೀಜಿಯವರ 114ನೇ ಜಯಂತಿಯ ಅಂಗವಾಗಿ ಚಾಮುಂಡಿಪುರಂ ವೃತ್ತದ ತಗಡೂರು ರಾಮಚಂದ್ರರಾವ್ ಉದ್ಯಾನದಲ್ಲಿ “ತ್ರಿವಿಧ ದಾಸೋಹಿ ನಮನ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್  ಮಾವಿನ ಸಸಿ ನೆಡುವ ಮೂಲಕ ಚಾಲನೆ ನೀಡಿದರು,

ನಂತರ  ಮಾತನಾಡಿ ಡಾ.ಶಿವಕುಮಾರ ಸ್ವಾಮೀಜಿ ಅವರು, ವಿರಕ್ತಾಶ್ರಮ ದೀಕ್ಷೆ ಪಡೆದು 1930ರಲ್ಲಿ ಸಿದ್ಧಗಂಗಾ ಕ್ಷೇತ್ರ ಪ್ರವೇಶಿಸಿದರು. ಜಂಗಮ ಮೂರ್ತಿಗಳಾದ ಶಿವಕುಮಾರ ಮಹಾಸ್ವಾಮಿಗಳು ಉದ್ಧಾನ ಶಿವಯೋಗಿಗಳ ಅಣತಿಯಂತೆ 1941ರಲ್ಲಿ ಸಿದ್ಧಗಂಗಾ ಮಠದ ಉತ್ತರಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡರು. ನಂತರ ಸಿದ್ಧಗಂಗಾ ಕ್ಷೇತ್ರದ ಸ್ವರೂಪ ಆಮೂಲಾಗ್ರವಾಗಿ ಬದಲಾವಣೆಯಾಯಿತು. ತಮ್ಮ ವೈಯುಕ್ತಿಕ ಜೀವನವನ್ನು ತ್ಯಾಗ ಮಾಡಿ ಸುಮಾರು 80 ವರ್ಷಗಳ ಕಾಲ ನಿರಂತರವಾಗಿ ಅವಕಾಶವಂಚಿತ ಮಕ್ಕಳಿಗೆ ಜಾತಿ, ಮತ, ಅಂತಸ್ತುಗಳನ್ನೆಣಿಸದೇ ಅನ್ನ ದಾಸೋಹದ ಜೊತೆಗೆ ಅಕ್ಷರವನ್ನು ಕಲಿಸಿ ಆರೋಗ್ಯ ಕಾರ್ಯಕ್ರಮಗಳನ್ನು ಆಯೋಜಿಸಿ ಅವರ ಬಾಳು ಉತ್ತಮ ಮಾರ್ಗದಲ್ಲಿ ಸಾಗಲು ಅಡಿಗಲ್ಲು ಹಾಕಿಕೊಟ್ಟ ಸಿದ್ದಗಂಗೆಯ ಸಿದ್ದಿಪುರುಷರು ಪೂಜ್ಯ ಸ್ವಾಮೀಜಿಯವರು ತುಮಕೂರು, ಮೈಸೂರು, ಬೆಂಗಳೂರು, ಚಾಮರಾಜನಗರ, ಮಾಗಡಿ ತಾಲ್ಲೂಕು, ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಇಂದಿಗೂ ಎಂದೆಂದಿಗೂ ಪ್ರಾತಃ ಸ್ಮರಣೀಯರಾಗಿದ್ದಾರೆ ಎಂದರು.

ಮೈಲಾಕ್ ಅಧಕ್ಷರಾದ ಎನ್.ವಿ ಫಣಿಶ್  ಮಾತನಾಡಿ
ಶತಾಯುಷಿಯಾಗಿ ಲಕ್ಷಾಂತರ ವಿದ್ಯಾರ್ಥಿಗಳ ಜೀವನಕ್ಕೆ ದಾರಿದೀಪವಾಗಿದ್ದ ಶಿವಕುಮಾರ ಸ್ವಾಮೀಜಿಯವರು ನಡೆದಾಡುವ ದೇವರು ಎಂದೇ ಪ್ರಖ್ಯಾತರು, 8ದಶಕಗಳು ಮಕ್ಕಳಿಗೆ ಶಿಕ್ಷಣ ಅನ್ನ ಆರೋಗ್ಯದ ಮಹತ್ವ ತಿಳಿಸಿದರು, ಡಾ. ಶಿವಕುಮಾರ ಸ್ವಾಮಿಜಿಗಳಿಗೆ ಭಾರತರತ್ನ ಕೊಡಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ, ಕೆಲವು ತಾಂತ್ರಿಕ ಕಾರಣಾಂತರಗಳಿಂದ ಪದ್ಮಭೂಷಣ ಬಂದ ಮೂರು ವರುಷಗಳ ನಂತರ ಭಾರತರತ್ನ ಪ್ರಕಟ ಮಾಡಬೇಕಾದ ನಿಯಾಮಾನುಸಾರ ಸಂಧರ್ಭದಿಂದ ಮುಂದೂಡಲ್ಪಟ್ಟಿತ್ತು, ಅಂತರಾಷ್ಟ್ರೀಯ ಮಟ್ಟದಲ್ಲಿ ಡಾ.ಶಿವಕುಮಾರ ಸ್ವಾಮೀಜಿಯವರಿಗೆ ಭಕ್ತವೃಂದವಿರುವುದರ ಕಾರಣ ನಮ್ಮ ಭಾರತದ ಸಂಸ್ಕೃತಿಯನ್ನು ವಿದೇಶಕ್ಕೆ ಪರಿಚಯಿಸಿದ ಮಹಾತ್ಮರು ಎಂದರು.

ಕೆ. ರಘುರಾಂ ವಾಜಪೇಯಿ  ಮಾತನಾಡಿ ದೇಶ ಮತ್ತು ಸಮಾಜದ ಪ್ರಗತಿಯ ಬಗ್ಗೆ ಕಳಕಳಿಯಿದ್ದ ಶಿವಕುಮಾರ ಸ್ವಾಮೀಜಿಯವರು ಯುವ ಪೀಳಿಗೆಯ ಬೆಳವಣಿಗೆಗಾಗಿ ವಿದ್ತಾವಂತರನ್ನಾಗಿಸಲು ಪದವಿಧರರನ್ನಾಗಿ ಮಾಡಲು ಪಣತೊಟ್ಟಿದ್ದರು. ಮಠದಲ್ಲಿ ವ್ಯಾಸಾಂಗ ಮಾಡಿದ ಎಷ್ಟೋ ಮಂದಿ ಸಮಾಜದ ಉನ್ನತ ಸ್ಥಾನದಲಿದ್ದಾರೆ ಗಣ್ಯರ ಬಾಲ್ಯ ಜೀವನಗಳ ಪರಿವರ್ತನೆಗೆ ಕಾರಣವಾಗಿದ್ದಾರೆ. ಸಿದ್ಧಗಂಗಾ ಮಠದಲ್ಲಿ ಹತ್ತು ಸಾವಿರ ವಿದ್ಯಾರ್ಥಿಗಳಿಗೆ ಆಶ್ರಯ ಕೊಟ್ಟು ತ್ರಿವಿಧ ದಾಸೋಹವನ್ನು ಸತತವಾಗಿ ನಡೆಸುತ್ತಾ ಬಂದಿದ್ದರು ಎಂದರು,

ಡಾ. ವೈಡಿ ರಾಜಣ್ಣ  ಮಾತನಾಡಿ ಜೀವನದಲ್ಲಿ ಶಿಸ್ತು ಮತ್ತು ಸಂಯಮವಿದ್ದರೆ ಬಾಳು ಸುಂದರವಾಗಿರುತ್ತದೆ ಅದಕ್ಕೆ ಮಾದರಿ ಸಿದ್ಧಗಂಗಾ ಮಠದ ಮಕ್ಕಳು ಇಂದು ದೇಶದ ಉನ್ನತ ಸ್ಥಾನದಲ್ಲಿ ಪ್ರಗತಿ ಸಾಧಿಸಿರುವುದು, ಶಿವಕುಮಾರ ಸ್ವಾಮೀಜಿಗಳಿಗೆ ಭಾರತರತ್ನ ಮೊದಲೇ ಕೊಡಬೇಕಿತ್ತು ಕೋಟ್ಯಾಂತರ ಪಾಲಿನ ಅನ್ನದಾತರು ಶಿವಕುಮಾರ ಸ್ವಾಮೀಜಿಯವರು ಎಂದರು.

ಕಾಂಗ್ರೆಸ್ ಮುಖಂಡರಾದ ಎನ್. ಎಂ ನವೀನ್ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸದಸ್ಯರಾದ ರೇಣುಕಾ ರಾಜ್, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಡಾ.ಗಿರೀಶ್, ಯುವ ಮುಖಂಡ ಅಜಯ್ ಶಾಸ್ತ್ರಿ, ಸುಚೀಂದ್ರ, ಮಧು ಪೂಜಾರ್, ಪೈಲ್ವಾನ್ ಸುನೀಲ್, ಪ್ರಶಾಂತ್, ಮಹೇಶ್, ಗುರುದತ್ತ, ಸಂತೋಷ್, ನಾಗರಾಜ್, ಮಲ್ಲೇಶ್ ಮುಂತಾದವರು ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: