ಮೈಸೂರು

ಜಿಲ್ಲೆಯಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕೇಂದ್ರ ಸ್ಥಾಪನೆ

ಮೈಸೂರು,ಏ . 1 :- 2020-21ನೇ ಸಾಲಿನ ಮುಂಗಾರು (ಖಾರೀಫ್) ಋತುವಿನಲ್ಲಿ ರೈತರು ಬೆಳೆದ ರಾಗಿಯನ್ನು ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿಸಲು ಮೈಸೂರು ಜಿಲ್ಲೆಗೆ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯನ್ನು ಖರೀದಿ ಏಜೆನ್ಸಿಯನ್ನಾಗಿ ನೇಮಿಸಿದ್ದು, ಜಿಲ್ಲೆಯಲ್ಲಿ 12 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರಾದ ಪಿ.ಶಿವಣ್ಣ ಅವರು ತಿಳಿಸಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಖರೀದಿಸಲು ತೀರ್ಮಾನಿಸಿರುವ ಕೃಷಿ ಉತ್ಪನ್ನಗಳಾದ ಸಾಮಾನ್ಯ ರಾಗಿ ಬೆಲೆಯನ್ನು 3295 ರೂ. ನಿಗದಿ ಮಾಡಲಾಗಿದೆ.
ಮೈಸೂರು ತಾಲ್ಲೂಕಿನಲ್ಲಿ ಬಂಡಿಪಾಳ್ಯದ ಎ.ಪಿ.ಎಂ.ಸಿ ಆವರಣ, ನಂಜನಗೂಡಿನ ಎ.ಪಿ.ಎಂ.ಸಿ ಆವರಣ, ಬಿಳಿಗೆರೆ ಖರೀದಿ ಕೇಂದ್ರ, ಟಿ.ನರಸೀಪುರದ ಎ.ಪಿ.ಎಂ.ಸಿ ಆವರಣ, ಬನ್ನೂರಿನ ಎ.ಪಿ.ಎಂ.ಸಿ ಆವರಣ, ಹುಣಸೂರು ತಾಲ್ಲೂಕಿನ ಎ.ಪಿ.ಎಂ.ಸಿ ಆವರಣ ಹಾಗೂ ರತ್ನಪುರಿ ಎ.ಪಿ.ಎಂ.ಸಿ ಆವರಣ, ಕೆ.ಆರ್.ನಗರದ ತಾಲ್ಲೂಕಿನ ಎ.ಪಿ.ಎಂ.ಸಿ ಆವರಣ ಹಾಗೂ ಚುಂಚನಕಟ್ಟೆಯ ಶ್ರೀ ರಾಮ ಸಹಕಾರ ಸಕ್ಕರೆ ಕಾರ್ಖಾನೆ ಉಗ್ರಾಣ, ಹೆಚ್.ಡಿ.ಕೋಟೆ ತಾಲ್ಲೂಕಿನ ಸರಗೂರು ಎ.ಪಿ.ಎಂ.ಸಿ ಆವರಣ, ಪಿರಿಯಾಪಟ್ಟಣ ತಾಲ್ಲೂಕಿನ ಎ.ಪಿ.ಎಂ.ಸಿ ಆವರಣ ಹಾಗೂ ಬೆಟ್ಟದಪುರದ ಎ.ಪಿ.ಎಂ.ಸಿ ಆವರಣದಲ್ಲಿ
ಕೃಷಿ ಇಲಾಖೆಯು ನೀಡಿರುವ ಕೃಷಿ ಬೆಳೆಗಳ ಉತ್ಪತ್ತಿ ಅಂದಾಜು ಮತ್ತು ರೈತರ ಅನುಕೂಲಗಳನ್ನು ಗಮನದಲ್ಲಿರಿಸಿಕೊಂಡು ರಾಗಿ ಖರೀದಿಗೆ ಕೇಂದ್ರಗಳನ್ನು ತೆರೆಯಲಾಗಿದೆ.
ರೈತರು ತಾವು ಬೆಳೆದ ಆಹಾರ ಧಾನ್ಯವನ್ನು ಗರಿಷ್ಠ ಪ್ರಮಾಣದಲ್ಲಿ ಕನಿಷ್ಠ ಬೆಂಬಲ ಬೆಲೆ ಖರೀದಿ ಕೇಂದ್ರಗಳ ಮೂಲಕ ಮಾರಾಟ ಮಾಡಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: