ಮೈಸೂರು

ಅಪರಿಚಿತ ವ್ಯಕ್ತಿಯ ಶವ ಪತ್ತೆ

ಮೈಸೂರು,ಏ . 1 :- ಮಂಡ್ಯ ರೈಲು ನಿಲ್ದಾಣದ ವೇದಿಕೆ ನಂ.3ರಲ್ಲಿ ರೈಲ್ವೆ ಓವರ್‍ಬ್ರಿಡ್ಜ್ ಸಮೀಪ ಬ್ರಿಡ್ಜ್ ನಂ.667 ರೈಲ್ವೆ ಕಿ.ಮೀ ನಂ.92/600-700 ಸಮೀಪದಲ್ಲಿ ಮಾರ್ಚ್ 31 ರಂದು ಸುಮಾರು 35 ವರ್ಷದ ಗಂಡಸಿನ ಅಪರಿಚಿತ ಶವ ಪತ್ತೆಯಾಗಿದ್ದು, ಪೊಲೀಸ್ ಠಾಣೆಯಲ್ಲಿ ಕಲಂ-174ರ ಅನ್ವಯ ಪ್ರಕರಣ ದಾಖಲಾಗಿದೆ.
ಮೃತರ ಚಹರೆ ಇಂತಿದೆ 

ಮೃತ ಪುರುಷನು 5.6 ಅಡಿ ಎತ್ತರವಿದ್ದು, ಕಪ್ಪು ಮೈಬಣ್ಣ ಸಾಧಾರಣಾ ಮೈಕಟ್ಟು, ಕೋಲಿ ಮುಖ, ದಪ್ಪ ಮೂಗು, ತಲೆಯಲ್ಲಿ ಕಪ್ಪು ಕೂದಲು, ಕಪ್ಪು ಬಣ್ಣದ ಮೀಸೆ ಮತ್ತು ದಾಡಿ ಹೊಂದಿದ್ದು, ತಿಳಿ ನೀಲಿ ಬಣ್ಣದ ತುಂಬು ತೋಳಿನ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಹಾಗೂ ಮಾಸಲು ಬಣ್ಣದ ಉಡುದಾರ ಇರುತ್ತದೆ.

ವಾರಸುದಾರರಿದ್ದಲ್ಲಿ ಮೈಸೂರು ರೈಲ್ವೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0821-2516579ಅನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

comments

Related Articles

error: