ಪ್ರಮುಖ ಸುದ್ದಿಮನರಂಜನೆ

ನಿಶ್ಚಿತಾರ್ಥ ಮಾಡಿಕೊಂಡ ಲಕ್ಷ್ಮಿ ಬಾರಮ್ಮ’ ಖ್ಯಾತಿಯ ನಟ ಚಂದನ್ ಕುಮಾರ್-ಕವಿತಾ ಗೌಡ

ರಾಜ್ಯ(ಬೆಂಗಳೂರು)ಏ.1:- ಲಕ್ಷ್ಮಿ ಬಾರಮ್ಮ’ ಖ್ಯಾತಿಯ ನಟ ಚಂದನ್ ಕುಮಾರ್ ಮತ್ತು ನಟಿ ಕವಿತಾ ಗೌಡ ಇಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಏಪ್ರಿಲ್ 1 ರಂದು ನಿಶ್ಚಿತಾರ್ಥ ಮಾಡಿಕೊಳ್ಳುವುದಾಗಿ ತಿಳಿಸಿದ್ದ ಜೋಡಿ ಹೇಳಿದಂತೆ ಎಂಗೇಜ್ ಆಗಿದೆ. ಬೆಂಗಳೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಚಂದನ್ ಕುಮಾರ್ ಮತ್ತು ಕವಿತಾ ಗೌಡ ಪರಸ್ಪರ ಉಂಗುರ ಬದಲಿಸಿಕೊಂಡಿದ್ದಾರೆ.
ಲಕ್ಷ್ಮಿ ಬಾರಮ್ಮ’ ಧಾರಾವಾಹಿ ಸಮಯದಿಂದಲೂ ಉತ್ತಮ ಸ್ನೇಹಿತರಾಗಿದ್ದ ಈ ಜೋಡಿ ಕಳೆದ ಕೆಲವು ತಿಂಗಳಿಂದ ಪ್ರೀತಿಯಲ್ಲಿದ್ದರು. ಇದೀಗ, ಎರಡು ಮನೆಯವರ ಒಪ್ಪಿಗೆ ಪಡೆದು ದಾಂಪತ್ಯ ಜೀವನ ಆರಂಭಿಸಲು ನಿರ್ಧರಿಸಿದ್ದಾರೆ. ಸದ್ಯ ನಿಶ್ಚಿತಾರ್ಥ ಮಾಡಿಕೊಂಡಿರುವ ಕವಿತಾ-ಚಂದನ್ ಜೋಡಿ ಮೇ ತಿಂಗಳಲ್ಲಿ ಮದುವೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

comments

Related Articles

error: