ದೇಶಪ್ರಮುಖ ಸುದ್ದಿ

ಪೆಟ್ರೋಲ್ ಬಂಕ್’ಗಳ ಭಾನುವಾರದ ರಜೆಗೆ ಬೆಂಬಲವಿಲ್ಲ : ಕೇಂದ್ರ ಸರ್ಕಾರ ಸ್ಪಷ್ಟನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂಧನ ಉಳಿಸುವಂತೆ ಕರೆ ನೀಡಿವರೇ ಹೊರತು ಭಾನುವಾರ ಪೆಟ್ರೋಲ್ ಬಂಕ್ ಗಳನ್ನು ಬಂದ್ ಮಾಡಿ ಎಂದು ಹೇಳಿಲ್ಲ. ಭಾನುವಾರ ರಜೆ ನೀಡುವ ಪೆಟ್ರೋಲ್ ಬಂಕ್ ಮಾಲೀಕರ ನಿರ್ಧಾರಕ್ಕೆ ಕೇಂದ್ರ ಸರ್ಕಾರದ ಬೆಂಬಲವಿಲ್ಲ ಎಂದು ಕೇಂದ್ರ ಸರ್ಕಾರ ತೈಲ ಸಚಿವಾಲಯ ಹೇಳಿದೆ.

ಬಂಕ್ ಮುಚ್ಚುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗಲಿರುವ ಕಾರಣ ಮುಂದಿನ ತಿಂಗಳ 14 ರಿಂದ ಪ್ರತಿ ಭಾನುವಾರ ಪೆಟ್ರೋಲ್ ಬಂಕ್ ಗಳನ್ನು ಮುಚ್ಚುವ ದಕ್ಷಿಣ ಭಾರತ ರಾಜ್ಯಗಳ ಪೆಟ್ರೋಲ್ ಬಂಕ್ ಮಾಲೀಕರ ಸಲಹೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಈ ಬಗ್ಗೆ ಹೇಳಿಕೆ ನೀಡಿದ್ದು, ವಾರದಲ್ಲಿ ಒಂದು ದಿನ ಪೆಟ್ರೋಲ್, ಡೀಸೆಲ್ ಬಳಕೆಯನ್ನು ಕಡಿಮೆಗೊಳಿಸುವ ಮೂಲಕ ದೇಶದ ಕಚ್ಚಾ ತೈಲದ ಆಮದು ತಗ್ಗಿಸಬಹುದು. ಈ ಮೂಲಕ ದೇಶಕ್ಕಾಗಿ ಇಂಧನ ಉಳಿತಾಯ ಮಾಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು “ಮನ್ ಕಿ ಬಾತ್”ನಲ್ಲಿ ಹೇಳಿದ್ದಾರೆಯೇ ಹೊರತು, ವಾರದಲ್ಲಿ ಒಂದು ದಿನ ಪೆಟ್ರೋಲ್ ಬಂಕ್ ಗಳನ್ನು ಮುಚ್ಚಲು ಅಲ್ಲ ಎಂದು ಹೇಳಿದ್ದಾರೆ.

ಈ ವಿಷಯದ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರು, “ಒಕ್ಕೂಟದ ಈ ಬೇಡಿಕೆಗೆ ಸಮ್ಮತಿಸುವ ಪ್ರಮೇಯವೇ ಇಲ್ಲ” ಎಂದಿದ್ದಾರೆ.

ನಮ್ಮ ಬೆಂಬಲವಿಲ್ಲ:

ದೇಶದಲ್ಲಿ ಶೇ.80ರಷ್ಟು ಪೆಟ್ರೋಲ್ ಬಂಕ್ ಗಳನ್ನು ಹೊಂದಿರುವ ಇಂಡಿಯನ್ ಪೆಟ್ರೋಲಿಯಂ ಡೀಲರ್ ಅಸೋಸಿಯೇಷನ್, ಪಂಪ್ ಮುಚ್ಚುವ ಪ್ರಕ್ರಿಯೆಯಲ್ಲಿ ತಾನಿಲ್ಲ ಎಂದಿದೆ. ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕೇರಳ, ಪುದುಚೇರಿ, ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳಲ್ಲಿ ಮೇ 14 ರಿಂದ ಭಾನುವಾರಗಳಂದು ಪೆಟ್ರೋಲ್ ಬಂಕ್ ಗಳಿಗೆ ರಜೆ ನೀಡಲು ಅನುಮತಿ ನೀಡುವಂತೆ ದಕ್ಷಿಣ ಭಾರತ ಪೆಟ್ರೋಲಿಯಂ ಡೀಲರ್ ಗಳ ಒಕ್ಕೂಟವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಈ ಪ್ರಸ್ತಾವನೆಗೆ ಕರ್ನಾಟಕದ ಡೀಲರ್ ಗಳು ಈ ಮೊದಲೇ ವಿರೋಧ ವ್ಯಕ್ತಪಡಿಸಿದ್ದರು.

Leave a Reply

comments

Related Articles

error: