ಕರ್ನಾಟಕಪ್ರಮುಖ ಸುದ್ದಿ

ತನ್ನ ಸಾವಿಗೆ ಪತ್ನಿ, ಮಗಳೇ ಕಾರಣ : ಡೆತ್ ನೋಟ್ ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ; ಮಡಿಕೇರಿಯಲ್ಲಿ ಘಟನೆ

ರಾಜ್ಯ(ಮಡಿಕೇರಿ)ಏ.2:-  ತನ್ನ ಮೇಲೆ ಮಗಳೇ ಅತ್ಯಾಚಾರ ಆರೋಪ ಹೊರಿಸಿದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವರು ಮನನೊಂದು ತನ್ನ ಸಾವಿಗೆ ಪತ್ನಿ, ಮಗಳೇ ಕಾರಣವೆಂದು ಡೆತ್‌ನೋಟ್ ಬರೆದಿಟ್ಟು   ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ತಾಲೂಕಿನ ಮರಗೋಡುವಿನಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಪುದಿಯೊಕ್ಕಡ ಭರತ್ (55) ಎಂದು ಹೇಳಲಾಗಿದೆ. ಇವರು ಡೆತ್ ನೋಟ್ ನಲ್ಲಿ ತನ್ನ ಸಾವಿಗೆ ಪತ್ನಿ ಮತ್ತು ಮಗಳು ಕಾರಣ. ನನ್ನ ಮೇಲೆ ಅತ್ಯಾಚಾರ ಆರೋಪ ಮಾಡಿ ಜೈಲಿಗೆ ಕಳುಹಿಸಿದರು. ಹೈಕೋರ್ಟ್‌ ನಲ್ಲಿ ಎಲ್ಲಾ ಆರೋಪಗಳಿಂದ ಮುಕ್ತನಾಗಿ ಬಂದರೂ ನೆಮ್ಮದಿಯಿಂದ ಬದುಕಲು ಬಿಡದೇ ದಾವೆ ಹೂಡಿದ್ದರು. ಲಕ್ಷಾಂತರ ಹಣಕ್ಕೆ ಬೇಡಿಕೆ ಇಟ್ಟಿದ್ದರು. ನನ್ನ ಬಳಿ ಯಾವುದೇ ಆಸ್ತಿ ಇಲ್ಲ. ಇವರಿಂದ ನೆಮ್ಮದಿಯೇ ಹಾಳಾಗಿದೆ  ಎಂದು   ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಕುರಿತು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: