ಮೈಸೂರು

ನಗರದ ವಿವಿಧೆಡೆ ವಾರಾಂತ್ಯದಲ್ಲಿ ಪ್ರದರ್ಶನಗೊಳ್ಳುವ ನಾಟಕಗಳು

ಮೈಸೂರು,ಏ.2-ನಗರದ ವಿವಿಧೆಡೆ ವಾರಾಂತ್ಯದಲ್ಲಿ ಪ್ರದರ್ಶನಗೊಳ್ಳುವ ನಾಟಕಗಳ ವಿವರ ಇಂತಿದೆ. ಏ.3 ರಂದು ಹಾಸ್ಯ ನಾಟಕ `ಹಸ್ಬೆಂಡ್ 360’, ಏ.4 ರಂದು ಸ್ಮಶಾನವಾಸಿಯ ಸ್ವಗತ, ಪರಿಹಾರ ನಾಟಕಗಳು ಪ್ರದರ್ಶನಗೊಳ್ಳಲಿದೆ.

ನಾಳೆ (ಶನಿವಾರ) ಸಂಜೆ 7 ಗಂಟೆಗೆ ರಾಮಕೃಷ್ಣನಗರದ ಸುಯೋಗ್ ಆಸ್ಪತ್ರೆ ಹಿಂಭಾಗವಿರುವ ರಮಾಗೋವಿಂದ ರಂಗಮಂದಿರದಲ್ಲಿ ಹಾಸ್ಯ ನಾಟಕ `ಹಸ್ಬೆಂಡ್ 360’ ನಾಟಕ ಪ್ರದರ್ಶನಗೊಳ್ಳಲಿದೆ. ನಾಗವೇಣಿ ರಂಗನ್ ರಚನೆಯ ನಾಟಕವನ್ನು ಅರ್ಚನಾ ಶ್ಯಾಮ್-ವಿಜಯ್ ಜೋಯಿಸ್ ನಿರ್ದೇಶಿಸಿದ್ದು, ಬೆಂಗಳೂರಿನ ಅಂತರಂಗ ತಂಡ ಪ್ರಸ್ತುತ ಪಡಿಸಲಿದೆ.

ಏ.4 ರಂದು ಸಂಜೆ 7 ಗಂಟೆಗೆ ಕಲಾಮಂದಿರದ ಕಿರುರಂಗಮಂದಿರದಲ್ಲಿ ಏಕವ್ಯಕ್ತಿ ರಂಗಪ್ರಯೋಗ `ಸ್ಮಶಾನವಾಸಿಯ ಸ್ವಗತ’ ನಾಟಕ ಪ್ರದರ್ಶನಗೊಳ್ಳಲಿದೆ. ಯವನಿಕಾ ಮೈಸೂರು ಇವರ ಸಹಕಾರದೊಂದಿಗೆ ಸ್ವಾತಿಕಂ ಥಿಯೇಟರ್ ಗ್ರೂಪ್ ಅರ್ಪಿಸುವ ನಾಟಕವನ್ನು ಸಾದರಪಡಿಸಲಿದೆ.

ಭೀಮಾಶಿ ಸಿದ್ದಗೂಳಿ ಮೂಲಕಥೆಯನ್ನು ಕರಿಯಪ್ಪ ಕವಲೂರು ಅವರು ರಂಗರೂಪ ಮತ್ತು ನಿರ್ದೇಶನ ಮಾಡಿದ್ದಾರೆ. ಭರತ್ ಡಿಂಗ್ರಿ ಸಂಗೀತ ನಿರ್ದೇಶನ, ಶಿವಕುಮಾರ್ ತೀರ್ಥಹಳ್ಳಿ ಬೆಳಕು ನಾಟಕಕ್ಕಿದೆ.

ಏ.4 ರಂದು ಸಂಜೆ 6.30ಕ್ಕೆ ರಾಮಕೃಷ್ಣನಗರದ ನಟನ ರಂಗಶಾಲೆಯಲ್ಲಿ ಭೀಷ್ಮ ಸಹಾನಿ ಅವರ `ಪರಿಹಾರ’ ನಾಟಕ ಪ್ರದರ್ಶನಗೊಳ್ಳಲಿದೆ. ನಾಟಕವನ್ನು ಕನ್ನಡಕ್ಕೆ ಅಶ್ವಿನಿ ರಂಗನ್ ಅವರು ಅನುವಾದಿಸಿದ್ದು, ಮೇಘ ಸಮೀರ ಅವರ ವಿನ್ಯಾಸ, ನಿರ್ದೇಶನವಿದೆ. ನಾಟಕವನ್ನು ನಟನ ರಂಗಶಾಲೆ ಪ್ರಸ್ತುತಪಡಿಸಲಿದೆ. (ಎಂ.ಎನ್)

Leave a Reply

comments

Related Articles

error: