ಕರ್ನಾಟಕಪ್ರಮುಖ ಸುದ್ದಿಮನರಂಜನೆ

ಕಬ್ಜ ಚಿತ್ರದ ಶೂಟಿಂಗ್ ವೇಳೆ ರಾಡ್ ಬಡಿದು ನಟ ಉಪೇಂದ್ರ ತಲೆಗೆ ಗಾಯ

ಬೆಂಗಳೂರು,ಏ.3-ಬಹು ನಿರೀಕ್ಷಿತ ಕಬ್ಜ ಸಿನಿಮಾ ಶೂಟಿಂಗ್ ವೇಳೆ ಕಬ್ಬಿಣದ ರಾಡ್ ಬಡಿದು ನಟ ಉಪೇಂದ್ರ ಗಾಯಗೊಂಡಿದ್ದಾರೆ.

ನಿನ್ನೆ ರಾತ್ರಿ ಮಿನರ್ವ ಮಿಲ್ ನಲ್ಲಿ ಉಪೇಂದ್ರಗೆ ಕಬ್ಬಿಣದ ರಾಡ್ ನಿಂದ ಹೊಡೆಯುವ ದೃಶ್ಯ ಚಿತ್ರೀಕರಿಸಲಾಗುತ್ತಿತ್ತು, ಈ ವೇಳೆ ಫೈಟರ್ ಹಿಂದಿನಿಂದ ಬೀಸಿದ ರಾಡ್ ನಿಂದ ತಪ್ಪಿಸಿಕೊಳ್ಳುವಾಗ ಮಿಸ್ ಆಗಿ ಅದು ಉಪೇಂದ್ರ ಅವರ ತಲೆಗೆ ತಾಗಿದೆ.

ಅದೃಷ್ಟವಶಾತ್ ಗಂಭೀರ ಗಾಯವಾಗಿಲ್ಲ. ಕೆಲಕಾಲ ಸುಧಾರಿಸಿಕೊಂಡ ನಂತರ ಉಪೇಂದ್ರ ಮತ್ತೆ ಶೂಟಿಂಗ್ ನಲ್ಲಿ ಭಾಗಿಯಾದರು.

ಆರ್.ಚಂದ್ರು ನಿರ್ದೇಶನದ ಕಬ್ಜದಲ್ಲಿ ಸಿನಿಮಾ ಮೂಡಿಬರುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾವಾಗಿರುವ ಕಬ್ಜ ಏಳು ಭಾಷೆಗಳಲ್ಲಿ ತೆರೆಗೆ ಬರಲಿದೆ. ಮೂಲಗಳ ಪ್ರಕಾರ, ಕನ್ನಡ, ತೆಲುಗು, ತಮಿಳು ಭಾಷೆಗಳಿಗೆ ಏಕಕಾಲದಲ್ಲಿ ಶೂಟಿಂಗ್ ಮಾಡಿ, ಮಿಕ್ಕ ಭಾಷೆಗಳಿಗೆ ಡಬ್ ಮಾಡುವ ಸಾಧ್ಯತೆಗಳಿವೆ.

ಕಬ್ಜ’ಗೆ ಇದುವರೆಗೂ ನಾಯಕಿ ಯಾರೆಂದು ಬಹಿರಂಗಗೊಂಡಿಲ್ಲ. ಆರಂಭದಲ್ಲಿ ಕಾಜಲ್ ಅಗರ್ವಾಲ್‌, ನಯನತಾರಾ ಹೆಸರುಗಳು ಚಾಲ್ತಿಯಲ್ಲಿದ್ದವು. ಆದರೆ, ಯಾರ ಹೆಸರು ಇನ್ನೂ ಕೂಡ ಅಂತಿಮವಾಗಿಲ್ಲ. ಇನ್ನು, ಈ ಸಿನಿಮಾಗೆ ‘ಕೆಜಿಎಫ್’ ಖ್ಯಾತಿಯ ರವಿ ಬಸ್ರೂರು ಸಂಗೀತ ನೀಡುತ್ತಿದ್ದಾರೆ. (ಎಂ.ಎನ್)

 

Leave a Reply

comments

Related Articles

error: