ಮೈಸೂರು

ಆಸ್ತಿ ತೆರಿಗೆ ಹೆಚ್ಚಳ ಕೈಬಿಡಲು ಪಡುವಾರಹಳ್ಳಿ ಎಂ ರಾಮಕೃಷ್ಣ ಒತ್ತಾಯ

ಮೈಸೂರು,ಏ.3:-  ಮೈಸೂರು ಮಹಾನಗರ ಪಾಲಿಕೆಯು ಪ್ರಸಕ್ತ ವರ್ಷದಿಂದ  ಶೇ.15 ರಷ್ಟು ತೆರಿಗೆ ಹೆಚ್ಚಳ ಮಾಡಲು ಹೊರಟಿರುವುದು ಜನವಿರೋಧಿ ನೀತಿಯಾಗಿದೆ ಎಂದು ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷ ಪಡುವಾರಹಳ್ಳಿ ಎಂ ರಾಮಕೃಷ್ಣ   ಖಂಡಿಸಿದ್ದಾರೆ.

ಮಾಧ್ಯಮ ಹೇಳಿಕೆ ನೀಡಿರುವ ಅವರು ಜನರ ಆರ್ಥಿಕ ಪರಿಸ್ಥಿತಿ ಕೊರೋನಾ ಮಹಾಮಾರಿಯಿಂದ ಕಂಗೆಟ್ಟಿದ್ದು ಅವರ ನಿತ್ಯ ಜೀವನದ ಮಟ್ಟ  ಸುಧಾರಿಸಲು ವರ್ಷಗಳ ಕಾಲಾವಕಾಶ ಬೇಕಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿತ್ಯೋಪಯೋಗಿ ವಸ್ತುಗಳಾದ ಗ್ಯಾಸ್, ಡೀಸೆಲ್‌, ಪೆಟ್ರೋಲ್,ಸಾರಿಗೆ ದರ ಹೆಚ್ಚಳದಿಂದಾಗಿ ತತ್ತರಿಸಿದ್ದಾರೆ.  ಇದರ ನಡುವೆ ನಗರಪಾಲಿಕೆಯು ಆಸ್ತಿ ತೆರಿಗೆಯನ್ನು ಹೆಚ್ಚಳ ಮಾಡುತ್ತಿರುವುದು ಮೊದಲೇ ನೊಂದಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆಡಳಿತ ಮಂಡಳಿಯ ಯಾವುದೇ ನಿರ್ಧಾರ ಜನಪರ ಹಿತಾಸಕ್ತಿ ಮತ್ತು ಕಾಳಜಿಯನ್ನು ಹೊಂದಿರಬೇಕಾಗಿದೆ. ಇದನ್ನು ಮರೆತು  ಮೈಸೂರು ಮಹಾನಗರ ಪಾಲಿಕೆಯು ಆಸ್ತಿ ತೆರಿಗೆಯನ್ನು ಹೆಚ್ಚಳ ಮಾಡುವ ಮೂಲಕ ಜನವಿರೋಧಿ ನೀತಿಯನ್ನು ಅನುಸರಿಸಿ ಅನುಸರಿಸುತ್ತಿರುವುದು  ಖಂಡನೀಯವಾಗಿದೆ

ಆದ್ದರಿಂದ ನಗರಪಾಲಿಕೆ ಆಸ್ತಿ ತೆರಿಗೆ ಹೆಚ್ಚಳ ನೀತಿಯನ್ನು ಕೈಬಿಡಬೇಕು. ತಪ್ಪಿದಲ್ಲಿ ರಾಜ್ಯಸರ್ಕಾರ ಮಧ್ಯಪ್ರವೇಶಿಸಿ ತೆರಿಗೆ ಹೆಚ್ಚಳ ನೀತಿಯನ್ನು ಜಾರಿಗೆ ತರಬಾರದೆಂದು   ಮನವಿ ಮಾಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: