ಮೈಸೂರು

ಹೆಚ್ಚುವರಿ ಕೊಠಡಿಗಳ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ

ಮೈಸೂರು,ಏ.5:- ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಂದು ಸಚಿವ ಎಸ್.ಟಿ.ಸೋಮಶೇಖರ್ ಮತ್ತು ಶಾಸಕ ಎಲ್.ನಾಗೇಂದ್ರ ಅವರು ಮೈಸೂರು ಮಹಾನಗರ ಪಾಲಿಕೆ ವಾರ್ಡ್ ನಂಬರ್ 23ರ ಸದಸ್ಯರಾದ ಪ್ರಮೀಳ ಭರತ್ ಉಪಸ್ಥಿತಿಯಲ್ಲಿ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಇಲಾಖೆಯ ಅನುದಾನದಲ್ಲಿ ಮಹಾರಾಣಿ ಪದವಿಪೂರ್ವ ಕಾಲೇಜು, ನಾರಾಯಣ ಶಾಸ್ತ್ರಿ ರಸ್ತೆ ಇಲ್ಲಿನ ಹೆಚ್ಚುವರಿ ಕೊಠಡಿಗಳ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ಒಂದು ಕೋಟಿ ಮೊತ್ತದ ಒಟ್ಟು ಕಾಮಗಾರಿಯಲ್ಲಿ ನೆಲಮಹಡಿಯಲ್ಲಿ ನಾಲ್ಕು ಕೊಠಡಿಗಳ ನಿರ್ಮಾಣ, ಮೊದಲ ಮಹಡಿಯಲ್ಲಿ ಮೂರು ಕೊಠಡಿಗಳ ನಿರ್ಮಾಣ, 2ಶೌಚಾಲಯಗಳ ನಿರ್ಮಾಣ ಕಾರ್ಯ ನಡೆಯಲಿದೆ.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ   ಸೋಮಣ್ಣ, ಚಾಮರಾಜ ಕ್ಷೇತ್ರದ ಭಾ.ಜ.ಪ, ಉಪಾಧ್ಯಕ್ಷರಾದ ಕುಮಾರಗೌಡ, ಚಾಮರಾಜ ಆಶ್ರಯ ಸಮಿತಿ ಸದಸ್ಯರಾದ ಅನೂಜ್, ಚಾಮರಾಜ ಯುವ ಮೋರ್ಚಾ ಅಧ್ಯಕ್ಷರಾದ  ಸಚಿನ್, ಎಸ್.ಟಿ.ಮೋರ್ಚಾ ಮುಖಂಡರಾದ ಪ್ರೇಮಕುಮಾರ್, ಬಿಜೆಪಿ ಮುಖಂಡರಾದ, ರಾಜೇಂದ್ರ, ಸುರೇಂಧ್ರ, ಸುದರ್ಶನ್, ವಿಘ್ನೇಶ್ವರ ಭಟ್, ಗೋಪಾಲ್, ಶ್ರೀನಿವಾಸ್, ಆನಂದ, ಚರಣ್, ನಾಗೇಶ್, ಕೆಂಪರಾಜು, ಕೃಷ್ಣ, ಕಾರ್ಯಾಲಯ ಕಾರ್ಯದರ್ಶಿ ವಿಷ್ಣು ಕುಮಾರ್, ರವಿಕುಮಾರ್ ಎಸ್, ಯೋಗೇಶ್, ಗೋಪಿ, ರವಿ, ಲಕ್ಷ್ಮಿ ಸುಬ್ಬರಾಯನಕೆರೆ, ಮಮತ, ಅಲ್ಪಸಂಖ್ಯಾತರ ಮೋರ್ಚಾ ಪ್ರಧಾನ ಕಾರ್ಯದರ್ಶಿ ತಬ್ರೇಜ್, ಮೈ.ಕಾ.ಪ್ರೇಮಕುಮಾರ್ ಮುಖಂಡರುಗಳಾದ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ನಾಗರಾಜ್, ಕಿರಿಯ ಇಂಜಿನಿಯರ್ ಸಂಗಮೇಶ್, ಗುತ್ತಿಗೆದಾರರಾದ  ಉಮೇಶ್ ಉಂಡುವಾಡಿ ಮುಂತಾದವರು ಹಾಜರಿದ್ದರು (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: