ಮನರಂಜನೆಮೈಸೂರು

ದಿವಂಗತ ಪುತ್ರನ ಫೋಟೋ ಜೊತೆ ಯುವರತ್ನ ಚಿತ್ರ ವೀಕ್ಷಿಸಿದ ಮುರಳೀಧರ್ ಕುಟುಂಬ : ಮನಸ್ಸು ಭಾರವಾಯಿತು ಎಂದ್ರು ಅಪ್ಪು

ಮೈಸೂರು/ಬೆಂಗಳೂರು,ಏ.5:- ಮೈಸೂರಿನ ಮುರಳೀಧರ್ ಹಾಗೂ ಕುಟುಂಬದವರು ಅವರ  ಪುತ್ರ ದಿ.ಹರಿಕೃಷ್ಣನ್ ಫೋಟೋ ಜೊತೆಗೆ ಯುವರತ್ನ ಸಿನಿಮಾ ನೋಡಿರುವ ದೃಶ್ಯಗಳನ್ನು ನೋಡಿ ನನ್ನ ಮನಸ್ಸು ಭಾರವಾಯಿತು ಎಂದು ನಟ ಪುನೀತ್ ರಾಜ್ ಕುಮಾರ್ ಟ್ವೀಟರ್ ಮೂಲಕ ಹಂಚಿಕೊಂಡಿದ್ದಾರೆ.

ಮೈಸೂರಿನ ಮುರುಳೀಧರ್ ಎಂಬವರ ಪುತ್ರ ಹರಿಕೃಷ್ಣನ್ ಎಂಬಾತ ಈಜಲು ಹೋಗಿ ನೀರಲ್ಲಿ ಮುಳುಗಿ ಸಾವನಪ್ಪಿದ್ದ. ಆತ ನಟ ಪುನೀತ್ ಅಭಿಮಾನಿಯಾಗಿದ್ದು, ಯುವರತ್ನ ನೋಡಬೇಕೆಂದು ತುಂಬಾ ಆಸೆಪಟ್ಟಿದ್ದ. ಮಗನ ಆಸೆಯನ್ನು ತೀರಿಸುವ ಸಲುವಾಗಿ, ಸಾವನಪ್ಪಿದ ಮಗನಿಗೂ ಒಂದು ಟಿಕೇಟ್ ಖರೀಸಿದ  ಪೋಷಕರು ಮೃತ ಮಗನ ಭಾವಚಿತ್ರವಿರಿಸಿ  ಸಿನಿಮಾ ವೀಕ್ಷಿಸಿದ್ದಾರೆ.

ಈ ವಿಷಯ ತಿಳಿದು ನಟ ಪುನೀತ್ ರಾಜ್ ಕುಮಾರ್ ಟ್ವೀಟ್ ಮಾಡಿದ್ದು, ಬಾಲಕ ಹರಿಕೃಷ್ಣನ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: