ಸುದ್ದಿ ಸಂಕ್ಷಿಪ್ತ

ಅರಿವು ಸಾಲ ನೀಡಲು ಅರ್ಜಿ ಆಹ್ವಾನ

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 2017-18ನೇ ಸಾಲಿಗೆ ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್ಸ್, ಬುದ್ದಿಸ್ಟ್, ಆಂಗ್ಲೋ ಹಾಗೂ ಪಾರ್ಸಿ ಜನಾಂಗದವರಿಂದ ಅರಿವು ಸಾಲ ಯೋಜನೆಯಡಿ ಮುಂಗಡ ವಿದ್ಯಾಭ್ಯಾಸ ಸಾಲಕ್ಕಾಗಿ ಅರ್ಜಿ ಆಹ್ವಾನಿಸಿದೆ.

ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಸಿ.ಇ.ಟಿ. ಮೂಲಕ ವಿವಿಧ ವೃತ್ತಿಪರ ಕೋರ್ಸ್‌ಗಳಾದ ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಇನ್ನಿತರ ಕೋರ್ಸ್‌ಗಳಿಗೆ ಹಾಗೂ ಸಿ.ಇ.ಟಿ ಹೊರತುಪಡಿಸಿ ವಿವಿಧ ವೃತ್ತಿಪರ ಕೋರ್ಸ್‌ಗಳಾದ ಐ.ಟಿ.ಐ ಡಿಪ್ಲೋಮಾ, ಎಂಟೆಕ್, ನರ್ಸಿಂಗ್, ಸ್ನಾತಕೋತ್ತರ ಪದವಿ  ಹಾಗೂ ಇನ್ನಿತರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಯಸುವ ವಿದ್ಯಾರ್ಥಿಗಳಿಗೆ, ಭೋಧನಾ ಶುಲ್ಕವನ್ನು ನಿಗಮದ ವತಿಯಿಂದ ನೇರವಾಗಿ ಸಂಬಂಧಪಟ್ಟ ಕಾಲೇಜಿಗೆ ಪಾವತಿಸಲಾಗುವುದು.

ಸದರಿ ಯೋಜನೆಯನ್ನು ಪಡೆಯಲು ನಿಗಮದ ವೆಬ್‌ಸೈಟ್ www.kmdc.kar.nic.in/arivu2 ನ್ನು ತೆರೆದು ಲಿಂಕ್ ಕ್ಲಿಕ್ ಮಾಡಬೇಕು. ನಂತರ ಅರ್ಜಿ ಭರ್ತಿ ಮಾಡಿ ನೇರವಾಗಿ ನಿಗಮದ ಜಿಲ್ಲಾ ಕಚೇರಿಗೆ ಸಲ್ಲಿಸುವುದು.

ಅರ್ಜಿ ಸಲ್ಲಿಸುವವರ ವಾರ್ಷಿಕ ಆದಾಯ ರೂ. 6 ಲಕ್ಷ ಮೀರಿರಬಾರದು, ಅರ್ಜಿಯೊಂದಿಗೆ ಆಧಾರ್ ಕಾರ್ಡ್, ಗುರುತಿನ ಚೀಟಿ, ಜಾತಿ ಮತ್ತು, 10ನೇ ತರಗತಿ, ದ್ವಿತೀಯ ಪಿ.ಯು.ಸಿ. ಮಾರ್ಕ್ಸ್ ಕಾರ್ಡ್‌ಗಳ ಪ್ರತಿ ಹಾಗೂ 02 ಭಾವಚಿತ್ರಗಳೊಂದಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ, # 446, ಎಸ್.ಕೆ.ಬಿ. ವಿದ್ಯಾ ಸಹಾಯ ಸಂಘ, 02ನೇ ಮಹಡಿ, ಪ್ರೊಫೇಷನಲ್ ಕೊರಿಯರ್ ಕಚೇರಿ ಎದುರು, ಲಕ್ಷ್ಮೀ ಟಾಕೀಸ್ ಎದುರು ರಸ್ತೆ, ಕೆಂಪನಂಜಾಂಬ ಅಗ್ರಹಾರ, ಕೆ.ಆರ್. ಮೊಹಲ್ಲಾ, ಮೈಸೂರು-008 ದೂರವಾಣಿ ಸಂಖ್ಯೆ 0821- 2420080 ನ್ನು ಸಂಪರ್ಕಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

comments

Related Articles

error: