
ದೇಶಪ್ರಮುಖ ಸುದ್ದಿ
ವಾಂಖೆಡೆ ಸ್ಟೇಡಿಯಂನ ಮತ್ತೆ ಮೂವರು ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ದೃಢ
ದೇಶ( ಮುಂಬೈ)ಏ.7:- ಐಪಿಎಲ್ ನ 14ನೇ ಆವೃತ್ತಿಗೆ ಕೊರೋನಾ ಕಾರ್ಮೋಡ ಆವರಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನ ಮತ್ತೆ ಮೂವರು ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ಏಪ್ರಿಲ್ 9ರಿಂದ ಐಪಿಎಲ್ ಪಂದ್ಯಗಳು ಆರಂಭಗೊಳ್ಳಲಿವೆ. ಈ ನಡುವೆ ಐಪಿಎಲ್ ಪಂದ್ಯ ನಡೆಯುವ ವಾಂಖೆಡೆ ಕ್ರೀಡಾಂಗಣದಲ್ಲೂ ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ.
ಈ ಮೊದಲು ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಕೆಲಸ ಮಾಡುತ್ತಿದ್ದ 10 ಮಂದಿ ಮೈದಾನದ ಸಿಬ್ಬಂದಿ ಮತ್ತು 5 ಮಂದಿ ಕಾರ್ಯಕ್ರಮ ನಿರ್ವಹಣಾ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಈಗ ಇನ್ನೂ ಇಬ್ಬರು ಮೈದಾನ ಸಿಬ್ಬಂದಿ ಮತ್ತು ಓರ್ವ ಪ್ಲಂಬರ್ಗೆ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ.
ಸ್ಟೇಡಿಯಂನ ಮತ್ತೆ ಮೂವರು ಸಿಬ್ಬಂದಿಗೆ ಕೊರೋನಾ ಬಂದಿರುವುದನ್ನು ಮುಂಬೈ ಕ್ರಿಕೆಟ್ ಅಸೋಸಿಯೇಶನ್ ಮೂಲಗಳು ಖಚಿತಪಡಿಸಿದ್ದು, ಮೈದಾನದ ಸಿಬ್ಬಂದಿ ಕೂಡ ಎಲ್ಲಿಯೂ ಪ್ರಯಾಣಿಸದಂತೆ, ಮೈದಾನದೊಳಗೇ ಉಳಿದುಕೊಳ್ಳುವಂತೆ ಸೂಚಿಸಿದ್ದಾರೆಂದು ತಿಳಿದು ಬಂದಿದೆ. (ಏಜೆನ್ಸೀಸ್,ಎಸ್.ಎಚ್)