ಕ್ರೀಡೆಪ್ರಮುಖ ಸುದ್ದಿ

ಐಪಿಎಲ್ 2021: ಮುಂಬೈ ಇಂಡಿಯನ್ಸ್ ವಿಕೆಟ್ ಕೀಪಿಂಗ್ ಸಲಹೆಗಾರ ಕಿರಣ್ ಮೋರೆಗೆ ಕೊರೋನಾ ಸೋಂಕು

ದೇಶ(ಮುಂಬೈ)ಏ.7:- ಐದು ಬಾರಿ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸ್ಕೌಟ್ ಮತ್ತು ವಿಕೆಟ್ ಕೀಪಿಂಗ್ ಸಲಹೆಗಾರ ಕಿರಣ್ ಮೋರೆ ಅವರಿಗೆ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ.
ಐಪಿಎಲ್ ಫ್ರ್ಯಾಂಚೈಸ್ ಹೇಳಿಕೆ ನೀಡಿದ್ದು, ಮೋರೆ ಅವರಿಗೆ ಪ್ರಸ್ತುತ ರೋಗಲಕ್ಷಣಗಳಿಲ್ಲ, ಅವರು ಐಸೋಲೇಟೆಡ್ ನಲ್ಲಿರುವುದಾಗಿ ಹೇಳಿದ್ದಾರೆ.
ಮುಂಬೈ ಇಂಡಿಯನ್ಸ್ ಮತ್ತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಆರೋಗ್ಯ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದಾರೆ. ಹೇಳಿಕೆಯ ಪ್ರಕಾರ, ಮುಂಬೈ ಇಂಡಿಯನ್ಸ್‌ ನ ವೈದ್ಯಕೀಯ ತಂಡವು ಮೋರೆ ಅವರ ಆರೋಗ್ಯವನ್ನು ನಿರಂತರವಾಗಿ ಗಮನಿಸುತ್ತಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: